Publish Date: Thu, 23 Nov 2023 (19:43 IST)
Updated Date: Thu, 23 Nov 2023 (19:21 IST)
ಸ್ಪೀಕರ್ ಸ್ಥಾನಕ್ಕೆ ಜಾತಿ, ಧರ್ಮದ ಬಣ್ಣ ಹಚ್ಚಿದ ಸಚಿವ ಜಮೀರ್ ಅಹಮದ್ ನನ್ನು ರಸ್ತೆಯಲ್ಲಿ ಓಡಾಡಲು ಬಿಟ್ಟಿರುವುದೇ ಹೆಚ್ಚು, ಎಲ್ಲರೂ ತಲೆತಗ್ಗಿಸುವ ಕೆಲಸ ಮಾಡಿರುವ ಅವರಿಂದ ಮುಖ್ಯಮಂತ್ರಿಗಳು ಈಗಾಗಲೇ ರಾಜೀನಾಮೆ ಪಡೆಯಬೇಕಿತ್ತು.
ಡಿ.4ರಿಂದ ಬೆಳಗಾವಿಯಲ್ಲಿ ನಡೆಯಲಿರುವ ಅಧಿವೇಶನದಲ್ಲಿ ಜಮೀರ್ ಅಹಮದ್ ಹೇಗೆ ಭಾಗವಹಿಸುತ್ತಾರೆ ಎಂಬುದನ್ನು ನೋಡುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸವಾಲು ಹಾಕಿದ್ದಾರೆ.