Select Your Language

Notifications

webdunia
webdunia
webdunia
webdunia

ರಮೇಶ್ ಜಾರಕಿಹೊಳಿ ಜೊತೆ ಚರ್ಚೆ ಮಾಡಿದ್ದೇನೆ-ವಿಜಯೇಂದ್ರ

Vijayendra
bangalore , ಗುರುವಾರ, 23 ನವೆಂಬರ್ 2023 (13:41 IST)
ರಮೇಶ್ ಜಾರಕಿಹೊಳಿ ಅವರ ನಡೆ ಬಗ್ಗೆ ಹಲವು ರೀತಿಯಲ್ಲಿ ಚರ್ಚೆ ನಡೆಯುತ್ತಿತ್ತು.ಕೆಲವು ಸಲ ಅವರು ಅಸಮಾಧಾನ ತೋಡಿಕೊಂಡಿದ್ರು.ನನ್ನ ಜವಾಬ್ದಾರಿ ಎಲ್ಲರನ್ನೂ ಪಕ್ಷದಲ್ಲಿ ಜತೆಗೆ ಕರೆದೊಯ್ಯುವುದು.ಈ ಹಿನ್ನೆಲೆಯಲ್ಲಿ ರಮೇಶ್ ಜಾರಕಿಹೊಳಿ ಭೇಟಿ ಮಾಡಿ ಅರ್ಧ ಗಂಟೆ ಚರ್ಚೆ ಮಾಡಿದ್ದೇನೆ.ಮೋದಿಯವ್ರು ಮತ್ತೆ ಪ್ರಧಾನಿ ಆಗಬೇಕು, ಪಕ್ಷದಲ್ಲಿ ಸಹಕಾರ ಕೊಡ್ತೇನೆ ಅಂತ ಹೇಳಿದ್ದಾರೆ.ಅವರಿಗೂ ಕೆಲವು ಸಣ್ಣಪುಟ್ಟ ಅಸಮಧಾನ ಇದ್ವು, ಅದರ ಬಗ್ಗೆ ಮಾತಾಡಿದ್ದಾರೆ ಎಂದು ವಿಜಯೇಂದ್ರ‌ ಹೇಳಿದ್ದಾರೆ.
 
ನನ್ನನ್ನು ವಿರೋಧಿಸಿದರೆ ಮೋದಿಯವರನ್ನು ವಿರೋಧಿಸಿದಂತೆ ಎಂಬ ವಿಜಯೇಂದ್ರ ಹೇಳಿಕೆ ವಿಚಾರವಾಗಿ ತಮ್ಮ ಹೇಳಿಕೆ ಬಗ್ಗೆ ವಿಜಯೇಂದ್ರ ಸ್ಪಷ್ಟನೆ ಕೊಟ್ಟಿದ್ದಾರೆ.ನನ್ನನ್ನು ಆಯ್ಕೆ ಮಾಡಿರೋದು ಯಡಿಯೂರಪ್ಪನವರಲ್ಲ.ನನ್ನನ್ನು ವರಿಷ್ಠರು, ಎಲ್ಲ ಹಿರಿಯರೂ ಆಯ್ಕೆ ಮಾಡಿದ್ದಾರೆ.ವರಿಷ್ಠರು ತೀರ್ಮಾನ ಮಾಡಿರುವ ಹಿನ್ನೆಲೆಯಲ್ಲಿ ಪಕ್ಷದ, ದೇಶದ ಹಿತದಿಂದ ನಾವೆಲ್ರೂ ಒಂದಾಗಿ ಹೋಗಬೇಕು.ಈ ಉದ್ದೇಶದಿಂದ ನಾನು ಹಾಗೆ ಹೇಳಿದ್ದೇನೆ ಅಷ್ಟೇ ಎಂದು ವಿಜಯೇಂದ್ರ‌ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಲೈಂಗಿಕ ಕ್ರಿಯೇ ನಂತರ ವ್ಯಕ್ತಿಯನ್ನು ಹತ್ಯೆಗೈದು ಮಹಿಳೆ ಪರಾರಿ