Select Your Language

Notifications

webdunia
webdunia
webdunia
webdunia

ವಿಜಯಯಾತ್ರೆ : ಕಾಂಗ್ರೆಸ್‍ಗೆ ಬೊಮ್ಮಾಯಿ ಸವಾಲು?

ವಿಜಯಯಾತ್ರೆ : ಕಾಂಗ್ರೆಸ್‍ಗೆ ಬೊಮ್ಮಾಯಿ ಸವಾಲು?
ಕಲಬುರಗಿ , ಸೋಮವಾರ, 31 ಅಕ್ಟೋಬರ್ 2022 (12:18 IST)
ಕಲಬುರಗಿ : ಜಿಲ್ಲೆಯಲ್ಲಿ ಬಿಜೆಪಿ ಆಯೋಜಿಸಿದ್ದ ವಿರಾಟ್ ಒಬಿಸಿ ಸಮಾವೇಶದಲ್ಲಿ ಕಾಂಗ್ರೆಸ್ ವಿರುದ್ಧ ಸಿಎಂ ಬಸವರಾಜ ಬೊಮ್ಮಾಯಿ ಮತ್ತೆ ಗುಡುಗಿದ್ದಾರೆ. ಒಬಿಸಿಗಳು ನಿಮ್ಮ ಜೇಬಲ್ಲಿ ಇಲ್ಲ.
 
ನಿಮಗೆ ತಾಕತ್ ಇದ್ರೆ, ಧಮ್ ಇದ್ರೆ ಬಿಜೆಪಿಯ ವಿಜಯಯಾತ್ರೆ ತಡೆಯಿರಿ ಎಂದು ಸವಾಲು ಹಾಕಿದ್ದಾರೆ.

ವೇದಿಕೆಯಲ್ಲಿ ಮಾತನಾಡಿದ ಅವರು, ನಾನು ನಿಮ್ಮ ಸೇವಕ. ನೀವು ನಮ್ಮ ಮಾಲೀಕರು. ನಮ್ಮನ್ನು ಮತ್ತೆ ಗೆಲ್ಲಿಸಿ ಎಂದು ಮನವಿ ಮಾಡಿದ್ದಾರೆ. ನೆರದಿದ್ದ ಜನರನ್ನ ನೋಡಿದ್ರೆ ಬಿಜೆಪಿ ಬಾವುಟ ವಿಧಾನಸೌಧ ಮೂರನೇ ಮಹಡಿ ಮೇಲೆ ಹಾರಾಡಲಿದೆ. ಹಿಂದುಳಿದ ವರ್ಗಕ್ಕೆ ಕಾಂಗ್ರೆಸ್ ಮೋಸ ಮಾಡಿ ಮತ ಪಡೆದಿದೆ. ಸಿದ್ದರಾಮಯ್ಯನವರಿಗೆ  ಬದಲಾವಣೆ ಕಾಲ ಬಂದಿದೆ.

ಎಲ್ಲರನ್ನು ಎಲ್ಲ ಕಾಲಕ್ಕೂ ಮೋಸ ಮಾಡಲು ಆಗುವುದಿಲ್ಲ. ಕಾಗಿನೇಲೆ ಅಭಿವೃದ್ಧಿ ಮಾಡಿದ್ದು ನಮ್ಮ ನಾಯಕ ಯಡಿಯೂರಪ್ಪನವರು. ಕುರುಬ ಸಮಾಜಕ್ಕೆ ಅನೇಕ ಕೊಡುಗೆ ನೀಡಿದ್ದು ನಮ್ಮ ಸರ್ಕಾರ. ಎಸ್ಸಿ, ಎಸ್ಟಿ ಮೀಸಲಾತಿ ಹೆಚ್ಚಳ ಮಾಡಿ ಆದೇಶ ಮಾಡಿದ್ದೇನೆ. ಈ ವರ್ಗಗಳಿಗೆ ಹೆಚ್ಚು ನ್ಯಾಯ ನೀಡಿದ್ದು ನಮ್ಮ ಸರ್ಕಾರ ಎಂದಿದ್ದಾರೆ. 


Share this Story:

Follow Webdunia kannada

ಮುಂದಿನ ಸುದ್ದಿ

ಎಮ್ಮೆ ಮೇಲೆ ರೇಪ್ ಮಾಡಿದ್ದ ವ್ಯಕ್ತಿ ಅರೆಸ್ಟ್!