Publish Date: Mon, 03 Aug 2026 (15:19 IST)
Updated Date: Mon, 03 Aug 2026 (15:26 IST)
ಬೆಂಗಳೂರು: ಮೊದಲು ವಿದ್ಯಾರ್ಥಿಗಳು 25 ದಿನ ಉಪವಾಸ ಸತ್ಯಾಗ್ರಹ ಕೂರಲಿ, ಬಳಿಕ ಲಾಠಿ ಚಾರ್ಜ್ ಆಗಲಿ ಆಮೇಲೆ ರಾಜೀನಾಮೆ ಕೊಡ್ತೀನಿ.. ಹೀಗಂತ ಗೃಹಸಚಿವ ಪ್ರಿಯಾಂಕ್ ಖರ್ಗೆ ವ್ಯಂಗ್ಯವಾಗಿ ಹೇಳಿದ್ದಾರೆ.
ಪೊಲೀಸ್ ನೇಮಕಾತಿ ಪರೀಕ್ಷೆಯಲ್ಲಿ ಆದ ಗೊಂದಲಗಳ ಬಗ್ಗೆ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಪ್ರಶ್ನೆ ಪತ್ರಿಕೆ ವಿತರಣೆಯಲ್ಲಿ ವಿಳಂಬ, ಒಎಮ್ಆರ್ ಶೀಟ್ ಗಳ ಗೊಂದಲಗಳಿಂದ ಹಲವು ಅಭ್ಯರ್ಥಿಗಳು ಪರೀಕ್ಷೆಯಿಂದ ಹೊರನಡೆಯಬೇಕಾದ ಪರಿಸ್ಥಿತಿ ಬಂದಿತ್ತು.
ಇದರಿಂದ ಸಾಕಷ್ಟು ಜನ ನಿರಾಶೆಗೊಳಗಾಗಿದ್ದರು. ತಮ್ಮ ಶ್ರಮವೆಲ್ಲಾ ವ್ಯರ್ಥವಾಯಿತು ಎಂದು ಹತಾಶೆಯಿಂದ ಕೆಲವರು ಮನೆಗೆ ಮರಳಬೇಕಾಯಿತು. ಈ ಘಟನೆ ಬಗ್ಗೆ ಗೃಹಸಚಿವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ಕೆಲವು ಗೊಂದಲಗಳು, ಸಂವಹನ ಕೊರತೆಯಿಂದ ಅಭ್ಯರ್ಥಿಗಳ ನಡುವೆ ಒಎಂಆರ್ ಶೀಟ್ ಮತ್ತು ಕ್ವೆಶ್ಚನ್ ಬ್ಯಾಂಕ್ ಸೀರಿಯಲ್ ನಂಬರ್ ಒಂದೇ ಆಗಿರಬೇಕು ಎಂದು ಗೊಂದಲಗಳಾಗಿತ್ತು. ಆದರೆ ಇದು ಅಗತ್ಯವಿರಲಿಲ್ಲ. ಕೆಲವರು ಇದು ಅಗತ್ಯ ಎಂದುಕೊಂಡು ಹೊರಗೆ ಹೋದರು. ಒಮ್ಮೆ ಹೊರಗೆ ಹೋದ ಮೇಲೆ ಅವರಿಗೆ ಒಳಗೆ ಬರಲು ಆಗಲಿಲ್ಲ. ಇದಕ್ಕೆ ಏನು ಮಾಡೋಣ ಎಂದು ನೋಡೋಣ.
ಒಂದು ವೇಳೆ ನೀವು ಗಲಾಟೆ ಮಾಡಿದರೆ ಕಾನೂನು ಕೈಗೆತ್ತಿಕೊಂಡರೆ ಏನು ಮಾಡಲು ಆಗುತ್ತೆ? ನಾವು ತಕ್ಕ ಕ್ರಮ ಕೈಗೊಳ್ಳಲೇಬೇಕಾಗುತ್ತದೆ ಎಂದಿದ್ದಾರೆ. ಬಳಿಕ ದೆಹಲಿ ಗಲಭೆ ಉಲ್ಲೇಖಿಸಿ ಅವರು ಮೊದಲು 25 ದಿನ ಉಪವಾಸ ಸತ್ಯಾಗ್ರಹ ಮಾಡಲಿ, ಬಳಿಕ ಲಾಠಿ ಚಾರ್ಜ್ ಆಗಲಿ ನಂತರ ನಾನು ರಾಜೀನಾಮೆ ಕೊಡ್ತೇನೆ. ನನ್ನ ರಾಜೀನಾಮೆ ಕೇಳುವವರು, ಪಿಎಸ್ಐ ಹಗರಣ ಆದಾಗ ಬೊಮ್ಮಾಯಿ, ಅರಗ ಜ್ಞಾನೇಂದ್ರ ಯಾಕೆ ರಾಜೀನಾಮೆ ನೀಡಲಿಲ್ಲ. ನಿನ್ನೆ ಲಕ್ಷಾಂತರ ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದರು ಅದರಲ್ಲಿ ಕೆಲವೇ ಜನರಿಗೆ ಮಾತ್ರ ಸಮಸ್ಯೆಯಾಗಿದ್ದಷ್ಟೇ ಎಂದು ವ್ಯಂಗ್ಯ ಮಾಡಿದ್ದಾರೆ.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ