Select Your Language

Notifications

webdunia
webdunia
webdunia
webdunia

ಕರ್ನಾಟಕ ನೂತನ ಸಚಿವರ ಪ್ರಮಾಣ ವಚನ ಇಂದು: ನೂತನ ಸಚಿವರ ಪಟ್ಟಿ ಇಲ್ಲಿದೆ

DK Shivakumar
ಬೆಂಗಳೂರು: ಕೊನೆಗೂ ಡಿಕೆ ಶಿವಕುಮಾರ್ ಸಚಿವರ ಪ್ರಮಾಣ ವಚನಕ್ಕೆ ಮುಹೂರ್ತ ಫಿಕ್ಸ್ ಆಗಿದೆ. ಸಚಿವರ ಪಟ್ಟಿ ಅಂತಿಮಗೊಂಡಿದ್ದು ಇಂದು ಸಂಜೆಯೇ ಲೋಕಭವನದಲ್ಲಿ ನೂತನ ಸಚಿವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
 

ಹಲವು ದಿನಗಳ ಕುತೂಹಲ, ಸರಣಿ ಸಭೆಗಳು ಹಾಗೂ ತೀವ್ರ ಕಸರತ್ತಿನ ನಂತರ ಕೊನೆಗೂ ಕರ್ನಾಟಕ ಕಾಂಗ್ರೆಸ್ ಸರ್ಕಾರದ ನೂತನ ಸಚಿವರ ಪಟ್ಟಿ ಅಧಿಕೃತವಾಗಿ ಹೊರಬಿದ್ದಿದೆ. ಹೈಕಮಾಂಡ್‌ನಿಂದ ಹಸಿರು ನಿಶಾನೆ ಸಿಕ್ಕ ಬೆನ್ನಲ್ಲೇ ಸಂಪುಟ ಸೇರ್ಪಡೆಯಾಗಲಿರುವ ನೂತನ ಶಾಸಕರ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದ್ದು, ಇಂದು ಸಂಜೆ ಲೋಕಭವನದಲ್ಲಿ (ರಾಜಭವನ/ಲೋಕಭವನ ಆವರಣ) ಹೊಸ ಸಚಿವರ ಪ್ರಮಾಣವಚನ ಸ್ವೀಕಾರ ಸಮಾರಂಭ ನಡೆಯಲಿದೆ.

ದೆಹಲಿಯಲ್ಲಿ ಕಾಂಗ್ರೆಸ್ ಅಧ್ಯಕ್ಷರು, ಪ್ರಮುಖ ನಾಯಕರು ಹಾಗೂ ರಾಜ್ಯ ನಾಯಕರ ನಡುವೆ ನಡೆದ ಸುದೀರ್ಘ ಚರ್ಚೆಯ ನಂತರ ಅಂತಿಮ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ. ಜಾತಿ, ಪ್ರಾದೇಶಿಕ ಸಮತೋಲನ ಮತ್ತು ಯುವ ಮುಖಗಳಿಗೆ ಆದ್ಯತೆ ನೀಡಿ ಈ ಪಟ್ಟಿಯನ್ನು ಆಖೈರುಗೊಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

 
ಡಿಕೆಶಿ ಸಂಪುಟದ ನೂತನ ಸಚಿವರ ಹೆಸರು ಇಲ್ಲಿದೆ:


ರಿಜ್ವಾನ್ ಅರ್ಷದ್, ಗಾಯತ್ರಿ ಶಾಂತೇಗೌಡ, ಡಾ ಅಜಯ್ ಸಿಂಗ್, ಶಿವಲಿಂಗೇ ಗೌಡ, ಎಚ್ ಸಿ ಬಾಲಕೃಷ್ಣ, ಜಮೀರ್ ಅಹ್ಮದ್, ಚೆಲುವರಾಯಸ್ವಾಮಿ, ಶಿವರಾಜ್ ತಂಗಡಗಿ, ಪಿಎಂ ನಾರಾಯಣಸ್ವಾಮಿ, ಟಿ ರಘುಮೂರ್ತಿ, ರುದ್ರಪ್ಪ ಲುಮಾಣಿ, ಬಿ ನಾಗೇಂದ್ರ, ಸಂತೋಷ್ ಲಾಡ್, ಮಧು ಬಂಗಾರಪ್ಪ,ಪುಟ್ಟರಂಗ ಶೆಟ್ಟಿ, ಮಾಂಕಾಳು ವೈದ್ಯ, ವಿಜಯಾನಂದ ಕಾಶಪ್ಪನವರ್,ಲಕ್ಷ್ಮಣ್ ಸವದಿ, ಬಸವರಾಜ ರಾಯರೆಡ್ಡಿ.

Share this Story:

Follow Webdunia kannada

ಮುಂದಿನ ಸುದ್ದಿ

ಕಾಶೀ ವಿಶ್ವನಾಥನ ಸನ್ನಿಧಿಯಲ್ಲಿ ಕರ್ನಾಟಕದ ಮಹಿಳೆಗೆ ಮೋಸ ಮಾಡಿದ ನಕಲಿ ಪೂಜಾರಿ: ಪೊಲೀಸರು ಸ್ಥಳದಲ್ಲೇ ಮಾಡಿದ್ದೇನು Video