Daily Horoscope

Select Your Language

Notifications

webdunia
webdunia
webdunia
webdunia

ಏಯ್ ಧನಂಜಯ ಮಸೀದಿ ಎದುರು ಬಂದಿದ್ದೀವಿ ನೋಡು ಬಾರ ಲೇ… ಗಣೇಶ ಮೆರವಣಿಗೆ ವೇಳೆ ಪ್ರತಾಪ್ ಸಿಂಹ ಆವಾಜ್ Video

Prathap Simha
ಮೈಸೂರು: ಏಯ್ ಧನಂಜಯ ಮಸೀದಿ ಮುಂದೆಯೇ ಬಂದಿದ್ದೀವಿ ನೋಡು ಬಾರ ಲೇಯ್.. ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಗಣೇಶ ಮೆರವಣಿಗೆ ವೇಳೆ ಟಿ ನರಸೀಪುರ ಇನ್ಸ್ ಪೆಕ್ಟರ್ ಧನಂಜಯ ವಿರುದ್ಧ ಗುಡುಗಿದ್ದಾರೆ.
 
ಟಿ ನರಸೀಪುರದಲ್ಲಿ ಲಿಂಕ್ ರಸ್ತೆಯಲ್ಲಿ ಮಸೀದಿ ಮುಂಭಾಗ ಗಣೇಶ ಮೆರವಣಿಗೆ ಮಾಡಬಾರದು ಎಂದು ಯುವಕರಿಗೆ ಆವಾಜ್ ಹಾಕಿದ ವಿಡಿಯೋ ವೈರಲ್ ಆಗಿತ್ತು. ಇದರ ವಿರುದ್ಧ ಬಿಜೆಪಿ ಮತ್ತು ಹಿಂದೂ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದ್ದವು. ಇನ್ಸ್ ಪೆಕ್ಟರ್ ಗ್ರಹಚಾರ ಬಿಡಿಸ್ತೀನಿ ಎಂದಿದ್ದನ್ನು ಸವಾಲಾಗಿ ಸ್ವೀಕರಿಸಿದ ಹಿಂದೂ ಸಂಘಟನೆಗಳು ಮತ್ತು ಬಿಜೆಪಿ ನಾಯಕರು ಅದೇ ರಸ್ತೆಯಲ್ಲಿ ಮೆರವಣಿಗೆ ಸಾಗಲು ಯೋಜನೆ ರೂಪಿಸಿದ್ದರು.
 
ಅದರಂತೆ ನಿನ್ನೆ ಅದೇ ರಸ್ತೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನ ಜಮಾಯಿಸಿದ್ದು, ಅದ್ಧೂರಿಯಾಗಿ ಗಣೇಶ ಮೆರವಣಿಗೆ ಮಾಡಿದ್ದಾರೆ. ಈ ವೇಳೆ ಮಾಜಿ ಸಂಸದ ಪ್ರತಾಪ್ ಸಿಂಹ ಕೂಡಾ ಸೇರಿಕೊಂಡಿದ್ದಾರೆ. ಕೇಸರಿ ಬಾವುಟ ಹಿಡಿದು ವಾಹನದ ಮೇಲೆ ಏರಿ ನಿಂತು ಇನ್ಸ್ ಪೆಕ್ಟರ್ ಧನಂಜಯಗೆ ಆವಾಜ್ ಹಾಕಿದ್ದಾರೆ.
 
‘ಏಯ್ ಧನಂಜಯ ಮಸೀದಿ ಮುಂದೆ ಹೋದ್ರೆ ಗಹಚಾರ ಬಿಡಿಸ್ತೀನಿ ಅಂದ್ಯಲ್ಲಾ.. ಅದೇ ರಸ್ತೆಯಲ್ಲಿ ಬಂದಿದ್ದೀವಿ ನೋಡು. ಬಾರೋ ಈಗ ಮಸೀದಿ ಮುಂದೆಯೇ ಬಂದಿದ್ದೀವಿ. ಇನ್ನು ಒಂದೂವರೆ ವರ್ಷಕ್ಕೆ ನಾವು ಅಧಿಕಾರಕ್ಕೆ ಬರ್ತೀವಿ, ಆಗ ಲೆಕ್ಕ ಚುಕ್ತಾ ಮಾಡ್ತೀವಿ’ ಎಂದು ಪ್ರಚೋದನಕಾರಿಯಾಗಿ ಮಾತನಾಡಿದ್ದಾರೆ.
 

pic.twitter.com/oEVhibnIPB

 

— Shilpa (@shilpa_cn)

Share this Story:

Follow Webdunia kannada

ಮುಂದಿನ ಸುದ್ದಿ

Karnataka Weather: ಬೆಂಗಳೂರು ಸೇರಿದಂತೆ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಮುನ್ನೆಚ್ಚರಿಕೆ