Select Your Language

Notifications

webdunia
webdunia
webdunia
webdunia

ಪ್ರದೀಪ್ ಈಶ್ವರ್ ಚಪ್ಪಲಿ ಎಸೆತ ಪ್ರಕರಣ: ಅವಮಾನವಾಗಿದ್ದರೆ ಮಾನನಷ್ಟ ಮೊಕದ್ದಮೆ ಹಾಗಬೇಕಿತ್ತು ಎಂದ ಜಡ್ಜ್ Video

Pradeep Eshwar
ಬೆಂಗಳೂರು: ಪ್ರದೀಪ್ ಈಶ್ವರ್ ವಿರುದ್ಧ ಚಪ್ಪಲಿ ಎಸೆತ ಪ್ರಕರಣದ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್ ನ್ಯಾಯಾಧೀಶ ಜಸ್ಟಿಸ್ ನಾಗಪ್ರಸನ್ನ ಅವಮಾನವಾಗಿದ್ದರೆ ಮಾನನಷ್ಟ ಮೊಕದ್ದಮೆ ಹಾಕಬೇಕಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ.

ಚಿಕ್ಕಬಳ್ಳಾಪುರದಲ್ಲಿ ಕೆಂಪೇಗೌಡ ಜಯಂತಿ ಉತ್ಸವದ ವೇಳೆ ಎಚ್ ಡಿ ಕುಮಾರಸ್ವಾಮಿ ಬೆಂಬಲಿಗರು ಮತ್ತು ಪ್ರದೀಪ್ ಈಶ್ವರ್ ನಡುವೆ ಘರ್ಷಣೆ ನಡೆದಿತ್ತು. ತಮ್ಮ ವಿರುದ್ಧ ಘೋಷಣೆ ಕೂಗಿದ ಕುಮಾರಸ್ವಾಮಿ ಬೆಂಬಲಿಗರತ್ತ ಪ್ರದೀಪ್ ಈಶ್ವರ್ ಮೀಸೆ ತಿರುವಿ ಸವಾಲು ಹಾಕಿದ್ದರು. ಇದರ ನಡುವೆ ಕೆಲವರು ಶಾಸಕರತ್ತ ಚಪ್ಪಲಿ ತೂರಿದ್ದರು.

ಈ ಸಂಬಂಧ ಪೊಲೀಸರು ಎಫ್ಐಆರ್ ದಾಖಲಿಸಿದ್ದರು. ಈ ಪ್ರಕರಣದ ವಿಚಾರಣೆಯನ್ನು ಕರ್ನಾಟಕ ಹೈಕೋರ್ಟ್ ನ್ಯಾಯಾಧೀಶ ನಾಗಪ್ರಸನ್ನ ನಡೆಸಿದ್ದು ನಾಲ್ವರ ವಿರುದ್ಧ ಕೇಸ್ ಗೆ ತಡೆ ನೀಡಿದ್ದಾರೆ. ಈ ಪ್ರಕರಣದ ವಿಚಾರಣೆ ವೇಳೆ ಏನಾಯ್ತು ಎಂಬುದರ ವಿಡಿಯೋ ಇಲ್ಲಿದೆ.

ಪ್ರದೀಪ್ ಈಶ್ವರ್ ಪರ ವಕೀಲರು ಪ್ರಕರಣದ ವಿವರಣೆ ನೀಡುವಾಗ ಶಾಸಕರನ್ನು ಹುಚ್ಚ, ಅಯೋಗ್ಯ ಎಂದು ಬಳಸುತ್ತಾರೆ ಎಂದಿದ್ದಾರೆ. ಆಗ ಮಧ್ಯಪ್ರವೇಶಿಸಿದ ನ್ಯಾಯಾಧೀಶರು ಮಾನನಷ್ಟ ಮೊಕದ್ದಮೆ ಹಾಕಿದ್ದಾರಾ? ಎಂದು ಕೇಳುತ್ತಾರೆ. ಆಗ ವಕೀಲರು ಇಲ್ಲ ಎನ್ನುತ್ತಾರೆ. ಆಗ ನ್ಯಾಯಾಧೀಶರು ಹಾಗಿದ್ದರೆ 800 ಜನರಲ್ಲಿ ನಾಲ್ಕು ಜನರು ಮಾತ್ರ ಕಂಡರಾ? ಉಳಿದವರ ವಿರುದ್ಧ ಕೇಸ್ ಯಾಕಿಲ್ಲ ಎಂದು ಪ್ರಶ್ನೆ ಮಾಡಿದ್ದಾರೆ. ಅಲ್ಲದೆ ಇದೇ ಕಾರಣಕ್ಕೆ ಈ ನಾಲ್ವರ ವಿರುದ್ಧ ಕೇಸ್ ಗೆ ತಡೆ ನೀಡಿದ್ದಾರೆ. ಈ ವಿಡಿಯೋ ಇಲ್ಲಿದೆ ನೋಡಿ.


Share this Story:

Follow Webdunia kannada

ಮುಂದಿನ ಸುದ್ದಿ

ರಾಹುಲ್ ಗಾಂಧಿ ಫಾರಿನ್ ಟೂರ್ ಮುಗಿಸಿ ಯಾವಾಗ ಬರ್ತಾರಪ್ಪಾ... ಕರ್ನಾಟಕ ಶಾಸಕರಿಗೆ ಕಾತುರತೆ ಹೆಚ್ಚಾಯ್ತು