Publish Date: Wed, 15 Jul 2026 (11:27 IST)
Updated Date: Wed, 15 Jul 2026 (11:32 IST)
ಬೆಂಗಳೂರು: ರಾಜಧಾನಿ ಬೆಂಗಳೂರಿನ ಸಾರ್ವಜನಿಕ ಸಾರಿಗೆಯಾದ ಬಿಎಂಟಿಸಿ ಬಸ್‌ಗಳಲ್ಲಿ ಕಳ್ಳರ ಉಪಟಳ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಈಗ ಬಸ್ ಸಿಬ್ಬಂದಿಯ ವಸ್ತುಗಳಿಗೂ ಭದ್ರತೆ ಇಲ್ಲದಂತಾಗಿದೆ. ಬಿಎಂಟಿಸಿ ಬಸ್‌ನಲ್ಲಿ ಕಂಡಕ್ಟರ್ ಅವರ ಹಣ ಹಾಗೂ ಟಿಕೆಟ್‌ಗಳಿದ್ದ ಬ್ಯಾಗ್ ಅನ್ನೇ ಚಾಣಾಕ್ಷತನದಿಂದ ಕದಿಯಲು ಯತ್ನಿಸಿದ ಮಹಿಳೆಯೊಬ್ಬಳು ರಂಗೇಹಸ್ತವಾಗಿ ಸಿಕ್ಕಿಬಿದ್ದಿರುವ ಆಘಾತಕಾರಿ ಘಟನೆ ನಡೆದಿದೆ.
ಕಿಕ್ಕಿರಿದು ತುಂಬಿದ್ದ ಬಸ್‌ನಲ್ಲಿ ಚಾಲಾಕಿ ಕೃತ್ಯ: ಬಸ್‌ನಲ್ಲಿ ಪ್ರಯಾಣಿಕರ ದಟ್ಟಣೆ ಹೆಚ್ಚಿದ್ದ ಸಮಯವನ್ನು ಬಳಸಿಕೊಂಡ ಈ ಮಹಿಳೆ, ಕಂಡಕ್ಟರ್ ಅವರ ಗಮನ ಬೇರೆಡೆ ಇದ್ದಾಗ ಅತ್ಯಂತ ಚಾಣಾಕ್ಷತನದಿಂದ ಅವರ ಬ್ಯಾಗ್ ಎಗರಿಸಿದ್ದಾಳೆ.
ಸ್ಥಳದಲ್ಲೇ ರೆಡ್‌ಹ್ಯಾಂಡ್ ಆಗಿ ಸೆರೆ: ಕಳ್ಳತನ ನಡೆಸಿ ಬಸ್‌ನಿಂದ ಪರಾರಿಯಾಗಲು ಯತ್ನಿಸುತ್ತಿದ್ದಂತೆಯೇ, ಕಂಡಕ್ಟರ್ ಹಾಗೂ ಬಸ್‌ನಲ್ಲಿದ್ದ ಇತರ ಪ್ರಯಾಣಿಕರ ಜಾಗರೂಕತೆಯಿಂದಾಗಿ ಮಹಿಳೆ ಸ್ಥಳದಲ್ಲೇ ಸಿಕ್ಕಿಬಿದ್ದಿದ್ದಾಳೆ. ತಕ್ಷಣವೇ ಆಕೆಯನ್ನು ವಶಕ್ಕೆ ಪಡೆದು ಸಾರ್ವಜನಿಕರು ತರಾಟೆಗೆ ತೆಗೆದುಕೊಂಡಿದ್ದಾರೆ.
ಸಾರ್ವಜನಿಕ ಸಾರಿಗೆಯಲ್ಲಿ ಧೈರ್ಯವಾಗಿ ನಡೆಸಲಾಗುತ್ತಿರುವ ಈ ರೀತಿಯ ಕಳ್ಳತನಗಳು ಸಾರ್ವಜನಿಕ ವಲಯದಲ್ಲಿ ತೀವ್ರ ಕಳವಳವನ್ನುಂಟು ಮಾಡಿವೆ. ದಿನವಿಡೀ ಪ್ರಯಾಣಿಕರಿಗೆ ಸೇವೆ ಸಲ್ಲಿಸುವ ಬಸ್ ಸಿಬ್ಬಂದಿಯ ಬ್ಯಾಗ್‌ಗಳೇ ಸುರಕ್ಷಿತವಾಗಿಲ್ಲ ಎಂದ ಮೇಲೆ, ಸಾಮಾನ್ಯ ಪ್ರಯಾಣಿಕರ ಪಾಡೇನು ಎಂಬ ಪ್ರಶ್ನೆ ಮೂಡಿದೆ.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ