Daily Horoscope

Select Your Language

Notifications

webdunia
webdunia
webdunia
webdunia

ಹೆದರ್ಕೋಬೇಡ ಎಷ್ಟು ಕೊಡ್ತಾರೆ ಹೇಳು… ಈರುಳ್ಳಿ ಮೂಟೆ ಮೇಲೆ ಕೂತು ರೈತರ, ವ್ಯಾಪಾರಿಗಳ ಸಮಸ್ಯೆ ಕೇಳಿದ ಸಿಎಂ ಡಿಕೆಶಿ Video

DK Shivakumar
ಬೆಂಗಳೂರು: ಹೆದರ್ಕೋಬೇಡ… ಎಷ್ಟು ವ್ಯಾಪಾರ ಆಗುತ್ತದೆ, ನಿಂಗೆ ಎಷ್ಟು ಕೊಡ್ತಾರೆ.. ಹೀಗಂತ ಇಂದು ಈರುಳ್ಳಿ ಬೆಳೆಗಾರರು ಮತ್ತು ವ್ಯಾಪಾರಿಗಳ ಜೊತೆ ಸಿಎಂ ಡಿಕೆ ಶಿವಕುಮಾರ್ ಸಂವಾದ ನಡೆಸಿದ್ದಾರೆ.

ಇಂದು ಬೆಳ್ಳಂ ಬೆಳಿಗ್ಗೆ ಯಶವಂತಪುರ ಎಪಿಎಂಸಿ ಮಾರುಕಟ್ಟೆಗೆ ದಿಡೀರ್ ಭೇಟಿ ನೀಡಿದ ಸಿಎಂ ಡಿಕೆ ಶಿವಕುಮಾರ್ ಅಲ್ಲಿನ ವಾಸ್ತವ ಸ್ಥಿತಿ ಖುದ್ದಾಗಿ ತಿಳಿಯುವ ಪ್ರಯತ್ನ ಮಾಡಿದ್ದಾರೆ. ಅಲ್ಲಿದ್ದ ರೈತರು, ವ್ಯಾಪಾರಸ್ಥರ ಜೊತೆ ಮಾತುಕತೆ ನಡೆಸಿದ್ದಾರೆ.

ರೈತರು ಮತ್ತು ವ್ಯಾಪಾರಸ್ಥರ ಸಮಸ್ಯೆಯೇನು ಎಂದು ಅವರ ಜೊತೆ ಮಾತನಾಡಿ ತಿಳಿದುಕೊಳ್ಳುವ ಪ್ರಯತ್ನ ಮಾಡಿದ್ದಾರೆ. ಇನ್ನು, ತಾವು ಸಿಎಂ ಎಂಬ ಬಿಗುಮಾನವಿಲ್ಲದೇ ಈರುಳ್ಳಿ ಮೂಟೆಗಳ ಮೇಲೆ ಜನ ಸಾಮಾನ್ಯರಂತೆ ಕೂತು ಜನರ ಸಮಸ್ತೆ ಆಲಿಸಿದ್ದಾರೆ.

ಈರುಳ್ಳಿ ಮಾರಾಟ ಮಾಡುವ ಪ್ರಕ್ರಿಯೆ, ತೂಕಕ್ಕೆ ಹಾಕುವುದನ್ನು ನೋಡಿ ವ್ಯವಹಾರ ಹೇಗೆ ನಡೆಯುತ್ತದೆ ಎಂದು ತಿಳಿಯುವ ಪ್ರಯತ್ನ ಮಾಡಿದ್ದಾರೆ. ಸಿಎಂ ದಿಡೀರ್ ಆಗಿ ಮಾರುಕಟ್ಟೆಗೆ ಭೇಟಿ ನೀಡಿದ್ದು ಅಲ್ಲಿದ್ದವರಿಗೂ ಅಚ್ಚರಿಯುಂಟು ಮಾಡಿತ್ತು. ಈ ವಿಡಿಯೋ ಇಲ್ಲಿದೆ ನೋಡಿ.


Share this Story:

Follow Webdunia kannada

ಮುಂದಿನ ಸುದ್ದಿ

ರಾಜ್ಯದ ಮೂಲೆ ಮೂಲೆಯಲ್ಲೂ ತಿರಂಗಾ ಯಾತ್ರೆ ಮಾಡ್ತೀವಿ, ತಾಕತ್ತಿದ್ದರೆ ಎಫ್ಐಆರ್ ಹಾಕಿ: ಪ್ರಿಯಾಂಕ್ ಖರ್ಗೆಗೆ ಸೂಲಿಬೆಲೆ ಸವಾಲ್