Select Your Language

Notifications

webdunia
webdunia
webdunia
webdunia

ಅಬ್ಬಾ ಸ್ಕೂಟರ್‌ನಲ್ಲಿ ಹೋಗುತ್ತಿದ್ದವನಿಗೆ ಎದುರಾದ ಗೂಳಿಗಳು, ಯುವಕನ ಪ್ರಾಣ ಉಳಿದಿದ್ದೆ ಹೆಚ್ಚು, Video

Gujarat Bull Attack Video
Photo Credit X
ಸ್ಕೂಟರ್‌ನಲ್ಲಿ ಹೋಗುತ್ತಿದ್ದ ಯುವಕನ ಮೇಲೆ ಗೂಳಿಯೊಂದು ದಾಳಿ ನಡೆಸಿದ ಪರಿಣಾಮ ಗಂಭೀರವಾಗಿ ಗಾಯಗೊಂಡಿರುವ ಘಟನೆ ಗುಜರಾತ್‌ನ ರಾಜ್‌ಕೋರ್ಟ್‌ನ ವೆರಾವಲ್‌ನಲ್ಲಿ ನಡೆದಿದೆ. 

ಈ ಭಯಾನಕ ಘಟನೆಯ ದೃಶ್ಯ ಅಲ್ಲೇ ಇದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ. 

ಯುವಕನೊಬ್ಬ ಸ್ಕೂಟರ್‌ನಲ್ಲಿ ಬರುತ್ತಿದ್ದಾಗ ಗೂಳಿ ಎದುರಾಗಿದೆ. ಗೂಳಿ ಹತ್ತಿರ ಬಂದು ಯುವಕನಿದ್ದ ಸ್ಕೂಟರ್ ಮೇಲೆ ದಾಳಿ ನಡೆಸಿದೆ. ಬಳಿಕ ಯುವಕನ ಮೇಲೂ ದಾಳಿ ನಡೆಸಲು ಆರಂಭಿಸಿದೆ.


ಕೂಗು ಕೇಳಿ ಮನೆಯಲ್ಲಿದ್ದವರು ಹೊರಬಂದಿದ್ದಾರೆ. ಆದರೆ ಬೃಹತ್ ಗಾತ್ರದ ಎರಡು ಗೂಳಿಗಳಿದಿದ್ದರಿಂದ ಜನರು ಅದರ ಹತ್ತಿರ ಹೋಗಲು ಭಯಬಿದ್ದಿದ್ದಾರೆ. ಈ ಸಂದರ್ಭದಲ್ಲಿ ಗೂಳಿ, ನೆಲಕ್ಕೆ ಬಿದ್ದಿದ್ದ ಯುವಕನ ಮೇಲೆ ಗಂಭೀರವಾಗಿ ದಾಳಿ ನಡೆಸಿದೆ. ಯುವಕ ಪ್ರಜ್ಞಾ ಹೀನಾ ಸ್ಥಿತಿಯಲ್ಲಿ ಬಿದ್ದಿದ್ದಾನೆ.

ಅಲ್ಲೇ ಇದ್ದ ಕೆಲವರು ನೀರು ಹಾಗೂ ಕೋಲಿನಿಂದ ಗೂಳಿಗೆ ಹೊಡೆದು ಓಡಿಸಿದ್ದಾರೆ. ಕೂಡಲೇ ಯುವಕನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. 

Share this Story:

Follow Webdunia kannada

ಮುಂದಿನ ಸುದ್ದಿ

ಆ ವ್ಯಕ್ತಿ ಮೇಲೆ ಏನು ಧ್ವೇಷವೋ, ತುಳಿದು ಚಚ್ಚಿದ ಬೀಡಾಡಿ ದನ: ಭಯಾನಕ Video