Publish Date: Fri, 19 Jan 2018 (09:50 IST)
Updated Date: Fri, 19 Jan 2018 (09:53 IST)
ಬೆಂಗಳೂರು: ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ರಾಜ್ಯ ರಾಜಧಾನಿ ಬೆಂಗಳೂರಿಗೆ ಭೇಟಿ ನೀಡಿದ್ದಾರೆ. ಈ ಸಂದರ್ಭದಲ್ಲಿ ಬಿಜೆಪಿ ನಾಯಕರು ಅವರಿಗೆ ಸಾಥ್ ನೀಡಿದ್ದಾರೆ.
ಬೆಂಗಳೂರಿನ ಬನಶಂಕರಿಯಲ್ಲಿರುವ ಸಂಸದ ಪಿ.ಸಿ. ಮೋಹನ್ ಮನೆಗೆ ಆಗಮಿಸಿದ ಉಪರಾಷ್ಟ್ರಪತಿಗಳು, ಅಲ್ಲಿಯೇ ಉಪಾಹಾರ ಸೇವಿಸಿದ್ದಾರೆ.
ಈ ಸಂದರ್ಭದಲ್ಲಿ ವೆಂಕಯ್ಯ ನಾಯ್ಡುಗೆ ಬಿಜೆಪಿ ನಾಯಕರಾದ ಸಂಸದ ಅನಂತಕುಮಾರ್, ಜಗದೀಶ್ ಶೆಟ್ಟರ್, ವಿ ಸೋಮಣ್ಣ ಮುಂತಾದವರು ಸಾಥ್ ನೀಡಿದ್ದರು. ಬೆಂಗಳೂರಿಗೆ ಬಂದ ವೆಂಕಯ್ಯ ನಾಯ್ಡುಗೆ ಬಿಜೆಪಿ ನಾಯಕರು ಅದ್ಧೂರಿ ಸ್ವಾಗತ ನೀಡಿದರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ