ಬಿಜೆಪಿಗೆ ಡೆಡ್ ಲೈನ್ ನೀಡಿದ ವಾಟಾಳ್ ನಾಗರಾಜ್

Webdunia
ಗುರುವಾರ, 1 ಫೆಬ್ರವರಿ 2018 (06:38 IST)
ಬೆಂಗಳೂರು : ಕನ್ನಡ ಪರ ಸಂಘಟನೆಯ ಅಧ್ಯಕ್ಷ ವಾಟಾಳ್ ನಾಗರಾಜ್ ಅವರು ಮಹದಾಯಿ ಸಮಸ್ಯೆಯನ್ನು ಪ್ರಧಾನಿ ನರೇಂದ್ರ ಮೋದಿ ಬಗೆ ಹರಿಸುವ ಭರವಸೆಯನ್ನು ನೀಡದೇ ಇದ್ದರೆ ಫೆ.4 ರಂದು ಬೆಂಗಳೂರು ಬಂದ್ ನಡೆಸಲಾಗುವುದು ಎಂದು ಹೇಳಿದ್ದಾರೆ.

 
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,’ ನಾವು ಜನವರಿ 25ರಂದು ಸ್ವಯಂ ಪ್ರೇರಿತವಾಗಿ ಕರ್ನಾಟಕ ಬಂದ್ ನಡೆಸಿದ್ದೇವೆ. ಇದಕ್ಕೆ ಯಾವ ಸರ್ಕಾರ ಕೂಡ ಬೆಂಬಲ ನೀಡಿರಲಿಲ್ಲ. ಆದರೆ ಬಿಜೆಪಿ ನಾಯಕರು ನಮ್ಮ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. ಅವರ ನಾಲಿಗೆ ಸರಿ ಇಲ್ಲ. ಹಾದಿಬೀದಿಯಲ್ಲಿ ಮಾತನಾಡುವುದನ್ನು ಬಿಟ್ಟು ಪ್ರಧಾನ ಮಂತ್ರಿ ಬಳಿ ಮಾತನಾಡಿ ಸಮಸ್ಯೆ ಬಗೆಹರಿಸಿ’ ಎಂದು ಬಿಜೆಪಿ ನಾಯಕರಿಗೆ ತಿಳಿಸಿದ್ದಾರೆ.

 
‘ಬಿಜೆಪಿ ಸಮಾವೇಶದಲ್ಲಿ ಪಾಲ್ಗೊಳ್ಳಲು ಫೆ. 4ರಂದು ಪ್ರಧಾನಿ ಮೋದಿ ಬೆಂಗಳೂರಿಗೆ ಬರುತ್ತಿದ್ದಾರೆ. ಹೀಗಾಗಿ 3ನೇ ತಾರೀಖಿನ ಒಳಗಡೆ ಮಹದಾಯಿ ನೀರಿನ ಸಮಸ್ಯೆಯನ್ನು ನಾನು ಬಗೆಹರಿಸುತ್ತೇನೆ ಎಂದು ಭರವಸೆ ಕೊಡಿಸಿ. ಇಲ್ಲದೇ ಇದ್ದರೆ 4ರಂದು ಬೆಂಗಳೂರು ಬಂದ್ ಮಾಡಬೇಕಾಗುತ್ತದೆ. ನಮಗೆ ಸ್ಪಷ್ಟವಾದ ಭರವಸೆ ಕೊಡಿಸಬೇಕು. ಶನಿವಾರ ಮಧ್ಯಾಹ್ನದ ತನಕ ಕಾಯುತ್ತೇವೆ. ಮಧ್ಯಾಹ್ನದ ಒಳಗಡೆ ಭರವಸೆ ಸಿಗದೇ ಹೋದರೆ ಬಂದ್ ಗೆ ಕರೆ ನೀಡಬೇಕಾಗುತ್ತದೆ ಎಂದು ವಾಟಾಳ್ ನಾಗರಾಜ್ ಅವರು ಬಿಜೆಪಿಗೆ ಡೆಡ್‍ಲೈನ್ ನೀಡಿದ್ದಾರೆ.

 
ನಾಳೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಜೊತೆ ಮಾತನಾಡಿ ಪ್ರಧಾನಮಂತ್ರಿಯವರಿಗೆ ಪತ್ರ ಬರೆಯುವಂತೆ ಮನವಿ ಮಾಡುತ್ತೇವೆ ಎಂದು ಕೂಡ ಅವರು ತಿಳಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕಾಂಗ್ರೆಸ್ ಶಾಸಕ ಅಶೋಕ್ ರೈ ಜನಪ್ರಿಯತೆ ಬೆನ್ನಲ್ಲೇ ಪುತ್ತೂರಿಗೆ ವಿಜಯೇಂದ್ರ ಭೇಟಿ

Karnataka Weather: ಇಂದು ಯಾವ ಜಿಲ್ಲೆಗಳಲ್ಲಿದೆ ಮಳೆ ಇಲ್ಲಿದೆ ಹವಾಮಾನ ವರದಿ

ಸಾಲು ಮರದ ತಿಮ್ಮಕ್ಕನ ಹೆಸರಿನಲ್ಲಿ ಹೊಸ ಘೋಷಣೆ ಮಾಡಿದ ಸಿಎಂ ಸಿದ್ದರಾಮಯ್ಯ

Viral video: ಗರ್ಭಿಣಿ ಮಹಿಳೆ ಮೇಲೆ ಮಾನವೀಯತೆ ಮರೆತು ಸ್ಕೂಟಿ ಹತ್ತಿಸಿದ ಪೊಲೀಸ್

ಶೂದ್ರರು ತಮ್ಮ ವಿರೋಧಿಯಾಗಿರುವ ಆರ್ ಎಸ್ಎಸ್ ಸೇರುತ್ತಾರಲ್ಲಾ ಏನು ಹೇಳೋದು: ಸಿದ್ದರಾಮಯ್ಯ

ಮುಂದಿನ ಸುದ್ದಿ
Show comments