Publish Date: Thu, 01 Feb 2018 (05:35 IST)
Updated Date: Thu, 01 Feb 2018 (05:40 IST)
ಬೆಂಗಳೂರು : ಸ್ಯಾಂಡಲ್ ವುಡ್ ನಟ ಕಿಚ್ಚ ಸುದೀಪ್ ಅವರು ಬಿಗ್ ಬಾಸ್ ರಿಯಾಲಿಟಿ ಶೋ ನ ಮೊದಲ ಸೀಸನ್ ನಿಂದಲೂ ನಿರೂಪಣೆ ಮಾಡುತ್ತಾ ಬಂದಿದ್ದು, ಅವರು ತಮ್ಮದೇ ಆದ ಶೈಲಿಯಲ್ಲಿ ಮಾಡುತ್ತಿದ್ದ ನಿರೂಪಣೆ ಹಾಗು ಸ್ಟೈಲಿಶ್ ಲುಕ್ ನಿಂದ ಅಪಾರ ಅಭಿಮಾನಿಗಳ ಮನಗೆದ್ದಿದ್ದಾರೆ.
ಇತ್ತೀಚೆಗಷ್ಟೇ ನಡೆದ ‘ಬಿಗ್ ಬಾಸ್’ ಸೀಸನ್ 5 ಫಿನಾಲೆಯ ವೇದಿಕೆಯಲ್ಲಿ ಸುದೀಪ್ ಅವರ ‘ಬಿಗ್ ಬಾಸ್’ ಜರ್ನಿಯ ವಿಟಿ ತೋರಿಸಲಾಗಿದೆ. ಇದನ್ನು ಮಾಜಿ ಸಚಿವ ಕುಮಾರ್ ಬಂಗಾರಪ್ಪ ಅವರೂ ವೀಕ್ಷಿಸಿ, ಸುದೀಪ್ ಅವರನ್ನು ಹೊಗಳಿದ್ದಾರೆ.
‘ಬಿಗ್ ಬಾಸ್’ನ ನಿಮ್ಮ ಪ್ರಯಾಣದ ವಿಟಿಯನ್ನು ನೋಡಿದೆ. ಸುಂದರವಾಗಿದೆ. ಕನ್ನಡ ಸಿನಿಮಾ ಇಂಡಸ್ಟ್ರಿ ಕಂಡ ಆಕರ್ಷಕ ನಟರಲ್ಲಿ ನೀವೊಬ್ಬರಾಗಿದ್ದೀರಿ. ದೇವರು ನಿಮಗೆ ಎಲ್ಲಾ ಯಶಸ್ಸು ನೀಡಲಿ. ನಿಮ್ಮ ವರ್ಣರಂಜಿತ ಪ್ರಯಾಣ ಯಶಸ್ಸಿನಲ್ಲಿ ಸಾಗಲಿ ಎಂದು ಹಾರೈಸಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಸುದೀಪ್, ಧನ್ಯವಾದ ಸಾರ್ ಹೇಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ