ಬೆಂಗಳೂರು: ನಾಳೆ ಕರ್ನಾಟಕ ಬಂದ್ ಗೆ ಕರೆ ನೀಡಿರುವ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಕಾರಿನಲ್ಲಿ ಬೆಂಗಳೂರು ರೌಂಡ್ಸ್ ಹೊಡೆದು ಬೆಂಬಲ ನೀಡುವಂತೆ ಮಾಲ್ ಮಾಲಿಕರನ್ನು ಒತ್ತಾಯಿಸಿದ್ದಾರೆ.
ಕರ್ನಾಟಕ ಬಂದ್ ಗೆ ನಾಳೆ ಕೆಲವು ಕನ್ನಡ ಸಂಘಟನೆಗಳು ಬೆಂಬಲ ನೀಡುತ್ತಿಲ್ಲ. ಕನ್ನಡ ಪರ ಹೋರಾಟ ಮಾಡುತ್ತಲೇ ಇರುತ್ತೇವೆ. ಆದರೆ ಬಂದ್ ಒಂದೇ ಇದಕ್ಕೆ ಪರಿಹಾರವಲ್ಲ ಎಂದು ಕರವೇ ಅಧ್ಯಕ್ಷ ನಾರಾಯಣ ಗೌಡ ಹೇಳಿದ್ದಾರೆ.
ಇನ್ನು, ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟ ಬಂದ್ ವಿರೋಧಿಸಿದೆ. ಮಕ್ಕಳಿಗೆ ಪರೀಕ್ಷೆ ಸಮಯವಿರುವಾಗ ಬಂದ್ ಮಾಡುವ ಅಗತ್ಯವೇನಿತ್ತು? ಇಂತಹ ಬಂದ್ ನಿಂದ ಯಾರಿಗೆ ಲಾಭ ಎಂದು ಪ್ರಶ್ನೆ ಮಾಡುತ್ತಿದ್ದಾರೆ.
ಇನ್ನು, ಬಂದ್ ಯಶಸ್ವಿಯಾಗಲು ವಾಟಾಳ್ ನಾಗರಾಜ್ ನಿನ್ನೆಯಿಂದ ಬೆಂಗಳೂರಿನಲ್ಲಿ ಸುತ್ತು ಹೊಡೆದು ಎಲ್ಲರ ಬೆಂಬಲ ಕೋರುತ್ತಿದ್ದಾರೆ. ಕಾರಿನಲ್ಲಿ ತಮ್ಮ ಬೆಂಬಲಿಗರ ಜೊತೆ ರೌಂಡ್ಸ್ ಹೊಡೆದು ಮಾಲ್ ಮಾಲಿಕರು, ಅಂಗಡಿ ಮಾಲಿಕರು, ಖಾಸಗಿ ಕಂಪನಿಗಳ ಮಾಲಿಕರಿಗೆ ಬಂದ್ ಮಾಡ್ಲೇಬೇಕು ಎಂದು ಒತ್ತಾಯಿಸಿದ್ದಾರೆ. ನಾಳೆ ಮಾಲ್ ಬಂದ್ ಇರುತ್ತೆ ಎಂದು ಬೋರ್ಡ್ ಹಾಕಿ ಎಂದು ಸ್ಥಳದಲ್ಲೇ ಒತ್ತಾಯಿಸಿದ್ದಾರೆ.