Select Your Language

Notifications

webdunia
webdunia
webdunia
webdunia

ಡಿವೋರ್ಸ್‌ ವದಂತಿಗೆ ಬಗ್ಗೆ ಮೌನ ಮುರಿದ ಭಾವನಾ ಮೆನನ್‌: ಬಹುಭಾಷಾ ನಟಿ ಹೇಳಿದ್ದೇನು

Multilingual actress Bhavana Menon, Kannada Sandalwood movie, movie producer Naveen

Sampriya

ಬೆಂಗಳೂರು , ಬುಧವಾರ, 19 ಮಾರ್ಚ್ 2025 (15:56 IST)
Photo Courtesy X
ಬೆಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ಸೆಲೆಬ್ರೆಟಿಗಳ ದಾಂಪತ್ಯ ಜೀವನದ ಬಗ್ಗೆ ಚರ್ಚೆ ನಡೆಯುತ್ತದೆ. ಡೈವರ್ಸ್‌ ವದಂತಿಗಳಿಗೂ ಕಡಿಮೆ ಇಲ್ಲ. ಅದಕ್ಕೆ ಪೂರಕ ಎಂಬಂತೆ ಈಚಿನ ವರ್ಷಗಳಲ್ಲಿ ಸಾಕಷ್ಟು ಸೆಲೆಬ್ರೆಟಿ ದಂಪತಿಗಳ ಬಾಳಿನಲ್ಲಿ ಬಿರುಗಾಳಿ ಎದ್ದಿರುವುದು ಸುಳ್ಳಲ್ಲ.

ಕನ್ನಡ, ಮಲಯಾಳಂ ಭಾಷೆಗಳಲ್ಲಿ ಸದಾ ಬ್ಯೂಸಿಯಾಗಿರುವ ನಟಿ ಭಾವನಾ ಮೆನನ್ಅವರ ವೈಯಕ್ತಿಕ ಬದುಕಿನ ಬಗ್ಗೆಯೂ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ನಡೆದಿದೆ. ಜಾಕಿ ಸೇರಿದಂತೆ ಕನ್ನಡದ ಹಲವು ಹಿಟ್‌ ಸಿನಿಮಾಗಳಲ್ಲಿ ನಟಿಸಿರುವ ಭಾವನಾ ಡಿವೋರ್ಸ್ ಕುರಿತು ವದಂತಿಗಳು ಚರ್ಚೆಯಾಗುತ್ತಲೇ ಇರುತ್ತದೆ. ಈ ಕುರಿತು  ಸಂದರ್ಶನವೊಂದರಲ್ಲಿ ಅವರೇ ಮೌನ ಮುರಿದಿದ್ದಾರೆ.

ಪ್ರತಿದಿನ ಸೋಶಿಯಲ್ ಮೀಡಿಯಾದಲ್ಲಿ ಫೋಟೋಗಳನ್ನು ಪೋಸ್ಟ್ ಮಾಡುವಂತಹ ಜೋಡಿ ನಾವಲ್ಲ. ಚಿನ್ನ, ಮುದ್ದು ಅಂತ ಅದಕ್ಕೆ ಕ್ಯಾಪ್ಷನ್ ಕೊಡಲ್ಲ. ಏನಾದರೂ ನಾನು ಫೋಟೋವೊಂದನ್ನು ಪೋಸ್ಟ್ ಮಾಡಿದರೆ, ಅಯ್ಯೋ ಇದು ಹಳೆಯ ಫೋಟೋ  ಎನ್ನುತ್ತಾರೆ. ನಿಮ್ಮ ನಡುವೆ ಸಮಸ್ಯೆ ಇದ್ಯಾ? ಅಂತೆಲ್ಲಾ ಸೋಶಿಯಲ್ ಮೀಡಿಯಾದಲ್ಲಿ ಕಾಮೆಂಟ್ ಮಾಡ್ತಾರೆ. ಅದಕ್ಕೆ ನಾನು ಪ್ರತಿ ನಿತ್ಯ ನಾವು ಫೋಟೋ ತೆಗೆದುಕೊಳ್ಳಲ್ಲ ಎಂದು ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿ ಡೈವರ್ಸ್‌ ವದಂತಿಗೆ ತೆರೆ ಎಳೆದಿದ್ದಾರೆ.

ನನ್ನ ವೈಯಕ್ತಿಕ ಜೀವನವನ್ನು ಪಬ್ಲಿಕ್ ಮಾಡಿ ಹೇಳಿಕೊಳ್ಳುವಂತಹ ವ್ಯಕ್ತಿ ನಾನಲ್ಲ. ಮನೆಯಲ್ಲಿ ಅಮ್ಮ, ಅಣ್ಣ ಎಲ್ಲರೂ ಇದ್ದಾರೆ. ಎಲ್ಲರೊಂದಿಗೆ ಪ್ರತಿದಿನ ಫೋಟೋ ಕ್ಲಿಕ್ಕಿಸಿಕೊಂಡು ಕೂರೋಕೆ  ಆಗುತ್ತಾ. ನಾನು ಮತ್ತು ನವೀನ್ ಚೆನ್ನಾಗಿದ್ದೇವೆ. ಸದ್ಯಕ್ಕೆ ಎಲ್ಲವೂ ಚೆನ್ನಾಗಿ ನಡೆಯುತ್ತಿದೆ ಎಂದು ಟ್ರೋಲಿಗರ ಬಾಯಿ ಮುಚ್ಚಿಸಿದ್ದಾರೆ.

ಸ್ಯಾಂಡಲ್‌ವುಡ್‌ನಲ್ಲಿ ಬಚ್ಚನ್, ಜಾಕಿ, 99, ಟಗರು, ಜಾಕಿ, ಮೈತ್ರಿ, ಭಜರಂಗಿ 2, ಯಾರೇ ಕೂಗಾಡಲಿ ಸೇರಿದಂತೆ ಹಲವು ಸಿನಿಮಾಗಳಲ್ಲಿನಟಿಸಿರುವ ಭಾವನಾ ಅವರು ಸಿನಿಮಾದ ನಿರ್ಮಾಪಕ ನವೀನ್  ಜೊತೆ ಭಾವನ್ ಮೆನನ್ 2018ರಲ್ಲಿ ಮದುವೆಯಾಗಿದ್ಧಾರೆ.  

Share this Story:

Follow Webdunia kannada

ಮುಂದಿನ ಸುದ್ದಿ

Gold Smuggling Case: ಇಡಿ ದಾಳಿಯಲ್ಲಿ ರನ್ಯಾ ಮನೆಯಲ್ಲಿ ಸಿಕ್ತು ಕಂತೆ ಕಂತೆ ಹಣ