ಮುಂಬೈ: ಬಾಲಿವುಡ್ ಸೂಪರ್‌ಸ್ಟಾರ್ ಶಾರುಖ್ ಖಾನ್ ಪುಷ್ಪ ಖ್ಯಾತಿಯ ನಿರ್ದೇಶಕ ಸುಕುಮಾರ್ ಅವರೊಂದಿಗೆ ಸಿನಿಮಾ ಮಾಡಲಿದ್ದಾರೆ. ಈ ಹಿಂದೆ ಶಾರುಖ್ ಸುಕುಮಾರ್ ಅವರೊಂದಿಗೆ ಸೈಕಲಾಜಿಕಲ್ ಥ್ರಿಲ್ಲರ್ ಚಿತ್ರದಲ್ಲಿ ನಟಿಸಲಿದ್ದಾರೆ ಎಂಬ ವದಂತಿ ಇತ್ತು, ಆದರೆ ಈಗ ವರದಿಗಳ ಪ್ರಕಾರ 59 ವರ್ಷದ ಶಾರುಖ್ ಗ್ರಾಮೀಣ ರಾಜಕೀಯ ಆಕ್ಷನ್ ಡ್ರಾಮಾದಲ್ಲಿ ಆ್ಯಂಟಿ ಹೀರೋ ಆಗಿ ನಟಿಸಲಿದ್ದಾರೆ.
ಗ್ರಾಮೀಣ ರಾಜಕೀಯ ಆಕ್ಷನ್ ಡ್ರಾಮಾ ಆಗಿರಲಿದೆ. ಈ ಸಿನಿಮಾದಲ್ಲಿ ಶಾರುಖ್ ಖಾನ್‌ಹಳ್ಳಿಗಾಡಿನ ದೇಸಿ ಅವತಾರದಲ್ಲಿ ಜನರನ್ನು ಮನರಂಜಿಸಲಿದ್ದಾರೆ ಎನ್ನಲಾಗಿದೆ. ಈ ಸಿನಿಮಾದಲ್ಲಿ ಜಾತಿ ಮತ್ತು ವರ್ಗ ದಬ್ಬಾಳಿಕೆಯಂತಹ ಸಾಮಾಜಿಕ ಸಮಸ್ಯೆಗಳು ಇರಲಿದೆ.
ಸುಕುಮಾರ್ ಮುಂದೆ ಆರ್‌ಸಿ 17 ನಲ್ಲಿ ರಾಮ್ ಚರಣ್ ಅವರನ್ನು ನಿರ್ದೇಶಿಸಲಿದ್ದಾರೆ, ನಂತರ ಅಲ್ಲು ಅರ್ಜುನ್ ಅಭಿನಯದ ಪುಷ್ಪ 3: ದಿ ರಾಂಪೇಜ್ ಮತ್ತು ರಾಮ್ ಅವರೊಂದಿಗೆ ಮತ್ತೊಂದು ಚಿತ್ರವನ್ನು ನಿರ್ಮಿಸಲಿದ್ದಾರೆ.
ಇದೇ ಮೇ ತಿಂಗಳಿನಲ್ಲಿ ಸಿನಿಮಾದ ಶೂಟಿಂಗ್ ಆರಂಭಗೊಳ್ಳಲಿದ್ದಾರೆ. ನಂತರ ನಟ 2023 ರ ಅವರ ಪುನರಾಗಮನ ಚಿತ್ರ ಪಠಾಣ್ ನ ಮುಂದುವರಿದ ಭಾಗವಾದ ಪಠಾಣ್ 2 ಗೆ ಮುಂದುವರಿಯಲಿದ್ದಾರೆ.