Select Your Language

Notifications

webdunia
webdunia
webdunia
webdunia

ಗ್ಯಾಸ್ ಬೆಲೆ ಏರಿಕೆ ವಿರುದ್ಧ ವಾಟಾಳ್ ಕಿಡಿ

ಗ್ಯಾಸ್ ಬೆಲೆ ಏರಿಕೆ ವಿರುದ್ಧ ವಾಟಾಳ್ ಕಿಡಿ
bangalore , ಶುಕ್ರವಾರ, 2 ಜುಲೈ 2021 (20:15 IST)
ಬೆಂಗಳೂರು: ಗ್ಯಾಸ್ ಬೆಲೆ ಏರಿಕೆ ವಿರುದ್ಧ ವಾಟಾಳ್ ಕಿಡಿಕಾರಿ  ಕೆಂಪೇಗೌಡ ಬಸ್ ನಿಲ್ದಾಣ ದಲ್ಲಿ ಖಾಲಿ ಸಿಲಿಂಡರ್ ನೊಂದಿಗೆ   ಕೇಂದ್ರದ ಸರ್ಕಾರದ ಡುಗೆ ಅನಿಲ ಬೇಲೆ ಏರಿಕೆಯ ವಿರುದ್ಧ ಪ್ರತಿಭಟನೆ ಮಾಡಿದರು.
 
ಈ ಸಂದರ್ಭದಲ್ಲಿ ಮಾತನಾಡಿದ ವಾಟಾಳ್ ನಾಗರಾಜ್ ಜನರ ಪರಿಸ್ಥಿಯನ್ನು ನೋಡಿ ನೋವಾಗುತ್ತದೆ, ಜನರಿಗಾಗಿ ಹೋರಾಟ ಮಾಡಿ ನನ್ನ ಜೀವನವನ್ನು ಅರ್ಪಣೆ ಮಾಡಿದ್ದೇನೆ, ಎಲ್ಲಿ ಜನಕ್ಕೆ ಅನ್ಯಾಯ  ಆಗುತ್ತದೆ ಅಲ್ಲಿ ಹೋರಾಟ ಮಾಡುವವವನೇ ವಾಟಾಳ ನಾಗರಾಜ್. ನನ್ನದು ನಿತ್ಯ ನಿರಂತ ಹೋರಾಟ, ಗ್ಯಾಸ್,ಪೆರ್ಟ್ರೋಲ್, ಡೀಸಲ್ ಬೆಲೆ ಏರಿಕೆಯಾದರು ಯಾಕೋ  ಜನ ಆರಾಮಾಗಿ ಕುಳಿತಿದ್ದಾರೆ ಎಂದು ಅಭಿಪ್ರಾಯಪಟ್ಟರು.
 
ಹೇಳಬೇಕಂದರೆ ಜನ ದಂಗೆ ಏಳಬೇಕು, ಕೇಂದ್ರದ ವಿರುದ್ಧ ಮಾತಾಡಬೇಕು , ರಾಜ್ಯ ರಾಜ್ಯಗಳಲ್ಲಿ, ಬೀದಿಯಲ್ಲಿ  ದಂಗೆ ಏಳಬೇಕು , ಕರ್ನಾಟಕ ಬಂಧ್ ಮಾಡಬೇಕು. ಸರ್ಕಾರ ಒಂದು ಕಡೆ ಕೊರೊನ ಪ್ಯಾಕೇಜ್ ಕೊಟ್ಟು ಮತ್ತೊಂದು ಕಡೆ ತೆರಿಗೆ ಹಾಕುವ ಮೂಲಕ ಮೂಲಕ ಹಣವನ್ನು ವಸೂಲಿ ಮಾಡುತ್ತಿದ್ದಾರೆ. ಈ ಕೆಲಸ ಬಡವರ ಮೇಲೆ ಬರೆಯಾಗಿದೆ , ಬೆನ್ನು ಮೂಳೆ ಮುರಿಯುವ ಕೆಲಸವಾಗಿದೆ, 6 ತಿಂಗಳಲ್ಲಿ ಎಲ್ಲಾ ತಿಂಗಳು ದರ ಏರಿಸಿದ್ದಾರೆ ಎಂದು ಕಿಡಿ ಕಾರಿದರು. 
 
ಎಲ್ಲಿ ಬಡವರು ದುಡ್ಡು ಕೊಡುವುದಕ್ಕಾಗುತ್ತೆ ಇದು ಬಹಳ ಅನ್ಯಾಯ, ಯಾವ ಮಂತ್ರಿ , ಎಂ.ಪಿ ಎಮ್ಮ್.ಎಲ್.ಎ ಗಳಿಗೆ ಈ ವಿಚಾರ ಬೇಕಾಗಿಲ್ಲ ಅದಕ್ಕೆ ಈ ಪರಿಸ್ಥಿತಿ ನಿರ್ಮಾಣ ಆಗಿದೆ. ನಿಜಕ್ಕೂ ಗ್ಯಾಸ್ ಬೆಲೆ ಏರಿಕೆಯನ್ನು , ತೀವ್ರವಾಗಿ , ಪ್ರಾಮಾಣಿಕವಾಗಿ ವಿರೀಧಿಸುತ್ತೇನೆ. ಈ ವಿಷಯವನ್ನು ಇಲ್ಲಿಗೆ ಬಿಡೋದಿಲ್ಲ , ರಾಜ್ಯದ ಜಿಲ್ಲೆ ಜಿಲ್ಲೆಗಳಲ್ಲಿ ಪ್ರತಿಭಟನೆ ಮಾಡುತ್ತೇನೆ  , ದರ ಏರಿಕೆಯನ್ನು ಹಿಂದೆ ಪಡೆಯಬೇಕೆಂದು ಕೇಂದ್ರ ಸರ್ಕಾರಕ್ಕೆ ಒತ್ತಾಯ ಮಾಡುತ್ತೇನೆ
ಎಂದು ಹೇಳಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಕರ್ನಾಟಕ ಭಾರತದ ಬಯೋಟೆಕ್ನಾಲಜಿಯ ರಾಜಧಾನಿ ವಿತ್ತ ಸಚಿವೆ ಶ್ರೀಮತಿ ನಿರ್ಮಲ ಸೀತಾರಾಮನ್