Select Your Language

Notifications

webdunia
webdunia
webdunia
webdunia

ಅಂಕಣಕಾರ ವಿಜ್ಞಾನಿ ಹಾಲ್ದೊಡ್ಡೇರಿ ಸುದೀಂದ್ರ ನಿಧನ

ಅಂಕಣಕಾರ ವಿಜ್ಞಾನಿ ಹಾಲ್ದೊಡ್ಡೇರಿ ಸುದೀಂದ್ರ ನಿಧನ
bangalore , ಶುಕ್ರವಾರ, 2 ಜುಲೈ 2021 (19:26 IST)
ಕನ್ನಡ ವಿಜ್ಞಾನ ಲೋಕದ ಧ್ರುವತಾರೆ ಹಾಲ್ದೊಡ್ಡೇರಿ ಸುಧೀಂದ್ರ ವಿಧಿವಶರಾಗಿದ್ದಾರೆ. ವಾರದ ಹಿಂದೆ ಹೃದಯಾಘಾತಕ್ಕೆ ಒಳಗಾಗಿದ್ದ ಸುಧೀಂದ್ರ ಅವರ ಮೆದುಳು ನಿಷ್ಕ್ರಿಯಗೊಂಡ ಹಿನ್ನೆಲೆಯಲ್ಲಿ ಶನಿವಾರ ಅಧಿಕೃತವಾಗಿ ಮೃತಪಟ್ಟಿದ್ದಾರೆ ಎಂದು ಘೋಷಿಸಲಾಯಿತು.
ಕಬ್ಬಿಣದ ಕಡಲೆಯಂತಹ ಕನ್ನಡ ವಿಜ್ಞಾನ ಲೇಖನಗಳನ್ನು ಸರಳಗನ್ನಡದಲ್ಲಿ ಸುಳಿದ ಬಾಳೆಯ ಹಣ್ಣಿನಂತೆ ಜನಸಾಮಾನ್ಯರಿಗೂ ಅರ್ಥವಾಗುವ ಹಾಗೆ ಬರೆಯುತ್ತಿದ್ದ ಅಕ್ಷರ ಧ್ರುವವತಾರೆ ಎನಿಸಿಕೊಂಡಿದ್ದ ಹಾಲ್ದೋಡ್ಡೇರಿ ಸುಧೀಂದ್ರ ಪತ್ರಿಕಾ ಅಂಕಣಕಾರ ವೈಜ್ಞಾನಿಕ ವಿಷಯಗಳ ಬಗ್ಗೆ ಆಳ ಅಧ್ಯಯನಶೀಲ ಬರಹಗಾರ ಎನಿಸಿಕೊಂಡಿದ್ದರು. 
7 ದಿನಗಳ ಕಾಲ ಸತತವಾಗಿ ವಿಧಿಯೊಡನೆ ಹೋರಾಡಿ, ಕೊನೆಗೂ ಇಂದು ಶುಕ್ರವಾರ ಮಧ್ಯಾಹ್ನ (ಜು.1) ಚಿರನಿದ್ರೆಗೆ ಜಾರಿದರು. ಡಿ.ಆರ್.ಡಿ.ಒ ಮಾಜಿ ವಿಜ್ಞಾನಿ, ಹೆಚ್.ಎ.ಎಲ್ ಸಂಸ್ಥೆಯ ಹಿರಿಯ ನಿವೃತ್ತ ಇಂಜಿನಿಯರ್ ಸುಧೀಂದ್ರ ಹಾಲ್ದೊಡ್ಡೇರಿ ಅವರ ದೇಹವನ್ನು ಆಸ್ಪತ್ರೆಗೆ ದಾನ ಮಾಡಲಾಯಿತು.

Share this Story:

Follow Webdunia kannada

ಮುಂದಿನ ಸುದ್ದಿ

ಸಂಚಾರಿ ವಿಜಯ್ ಅಫಘಾತದ ಕುರಿತು ಹೇಳಿಕೆ