Publish Date: Tue, 09 Jan 2018 (14:14 IST)
Updated Date: Tue, 09 Jan 2018 (14:18 IST)
ಏಯ್ ಅಧ್ಯಕ್ಷಾ, ಏಯ್ ಚಮಚಾ ನಿಂತ್ಕೊಳ್ಳೋ ಎಂದು ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ವಿರುದ್ಧ ಮಾಜಿ ಶಾಸಕ ವೈಜಿನಾಥ್ ಪಾಟೀಲ್ ಹರಿಹಾಯ್ದ ಘಟನೆ ವರದಿಯಾಗಿದೆ.
ಕೆಪಿಸಿಸಿ ಕಚೇರಿಯಲ್ಲಿ ನಡೆದ ಸಭೆಗೆ ಹಾಜರಾಗಿದ್ದ ವೈಜಿನಾಥ್ ಪಾಟೀಲ್, ಧರ್ಮಸಿಂಗ್ ಮತ್ತು ಮಲ್ಲಿಕಾರ್ಜನ್ ಖರ್ಗೆ ಮಕ್ಕಳಿಗೆ ಪಕ್ಷದ ಟಿಕೆಟ್ ಕೊಡ್ತಾರೆ. ನನ್ನ ಪುತ್ರಿ ವಿಕ್ರಂ ಪಾಟೀಲ್‌ಗೆ ಯಾಕೆ ಟಿಕೆಟ್ ಕೊಡುವುದಿಲ್ಲ ಎಂದು ಪ್ರಶ್ನಿಸಿದ್ದಾರೆ.
ಕಳೆದ ಎರಡು ವರ್ಷಗಳಿಂದ ನನಗೆ ಪಕ್ಷದಲ್ಲಿ ಯಾವುದೇ ಸ್ಥಾನಮಾನ ನೀಡಿಲ್ಲ. ಹಲವು ಆಶ್ವಾಸನೆಗಳನ್ನು ನೀಡಿ ಪಕ್ಷಕ್ಕೆ ಕರೆತಂದಿದ್ದಾರೆ. ಆದರೆ, ಇಲ್ಲಿಯವರೆಗೆ ಯಾವುದೇ ಅಶ್ವಾಸನೆ ಈಡೇರಿಲ್ಲ ಎಂದು ಕಿಡಿಕಾರಿದ್ದಾರೆ.
ಮಾಜಿ ಶಾಸಕ ವೈಜಿನಾಥ್ ಪಾಟೀಲ್ ಬಾಯಿ ಹರಿಬಿಡುತ್ತಿದ್ದಂತೆ ಅಲ್ಲಿಂದ ತೆರಳುತ್ತಿದ್ದ ಪರಮೇಶ್ವರ್‌ಗೆ ಅವಾಜ್ ಹಾಕಿದ ವೈಜಿನಾಥ್, ನಾನು ಮಾತಾಡುತ್ತಿದ್ರೆ ನೀವು ಓಡಿ ಹೋಗ್ತಿರಲ್ಲ ಚಮ್ಚಾ ಅಧ್ಯಕ್ಷರೇ ಎಂದು ಜೋರಾಗಿ ಕೂಗಿದ ಘಟನೆ ಕೂಡಾ ನಡೆದಿದೆ ಎಂದು ಮೂಲಗಳು ತಿಳಿಸಿವೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.