Select Your Language

Notifications

webdunia
webdunia
webdunia
Saturday, 5 April 2025
webdunia

ಪೋಸ್ಟರ್ ಮಾತ್ರ ಕಾಣಿಸುತ್ತೆ, ಲಸಿಕೆ ಮಾತ್ರ ಇಲ್ಲ: ಯುಟಿ ಖಾದರ್ ವ್ಯಂಗ್ಯ

ut khadar
bengaluru , ಮಂಗಳವಾರ, 20 ಜುಲೈ 2021 (16:21 IST)
ಮಂಗಳೂರಿನಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಿಯವರು ಜನರಿಗೆ ಉಚಿತ ಲಸಿಕೆ ನೀಡುತ್ತೇವೆ ಅಂತಾರೆ. ಆದರೆ ಉಚಿತ ಲಸಿಕೆಯ ಪೋಸ್ಟ್ ಮಾತ್ರ ಜನರ ಕಣ್ಣಿಗೆ ಕಾಣುತ್ತಿವೆ ಹೊರತು ಈವರೆಗೆ ಉಚಿತ ಲಸಿಕೆ ಮಾತ್ರ ಜನರಿಗೆ ಸಿಗುತ್ತಿಲ್ಲ ಎಂದು ಕಿಡಿಕಾರಿದರು.
ಸರಕಾರದಿಂದ ಬರೀ ಆದೇಶಗಳು ಮಾತ್ರ ಜಾರಿಯಾಗುತ್ತಿವೆ. ಒಂದೂವರೆ ಲಕ್ಷದ ಲಸಿಕೆಯ ಅವಶ್ಯಕತೆ ನಮ್ಮ ಜಿಲ್ಲೆಗೆ ಇದೆ. ಹೀಗಾಗಿ ಜಿಲ್ಲಾ ಉಸ್ತುವಾರಿ ಸಚಿವರ ಕೂಡಲೇ ಕ್ರಮ ವಹಿಸಬೇಕು. ಸರಕಾರ ತಮ್ಮ ರಾಜಕೀಯ ಆಟದಲ್ಲಿ ಮಗ್ನರಾಗಿ ಲಸಿಕೆ ಬಗ್ಗೆ ಕಾಳಜಿ ವಹಿಸುತ್ತಿಲ್ಲ ಎಂದು ಖಾದರ್ ಆರೋಪಿಸಿದರು.
ಇನ್ನು ಮಂಗಳೂರಲ್ಲಿ ಅವತ್ತು ರಾಜ್ಯಮಟ್ಟದ ಬಿಜೆಪಿ ಕಾರ್ಯಕಾರಿಣಿ‌ ಸಭೆ ನಡೆಯ್ತು. ಅವತ್ತು‌ ನಾವೆಲ್ಲಾ ಆ ಸಭೆಯಲ್ಲಿ ರಾಜ್ಯದ ಅಭಿವೃದ್ಧಿ ‌ಬಗ್ಗೆ ಚರ್ಚೆಯಾಗುತ್ತದೆ, ರಾಜ್ಯಕ್ಕೆ ಏನಾದ್ರೂ ಕೊಡುಗೆ ಸಿಗುತ್ತದೆ ಎಂದು ಭಾವಿಸಿದ್ದೇವು. ಈ ಸಭೆಗೆ ಭಾರೀ ಪ್ರಚಾರ ಕೂಡಾ ಕೊಡಲಾಯಿತು. ಆದ್ರೆ ಸಭೆ ಮುಗಿದ ಸಂಜೆ ಮಾತ್ರ ನಾವು ಲವ್ ಜಿಹಾದ್ ತಡೆ ಕಾನೂನು ತರುತ್ತೀವಿ ಎಂದು ತೀರ್ಮಾನ ಮಾಡಿದ್ದೀವಿ ಅಂತಾ ಹೇಳಿ ಹೋರಟವರು ಎಲ್ಲಿಗೆ ಹೋದ್ರು ಎಂದು ಮಾಜಿ ಸಚಿವ ಯುಟಿ ಖಾದರ್ ಪ್ರಶ್ನೆ ಮಾಡಿದರು. ಈಗ ಯುಪಿಯಲ್ಲಿ ಚುನಾವಣೆ ಬರುತ್ತೆ ಎಂದು ಹೊಸ ಸಬ್ಜೆಕ್ಟ್ ಹುಡುಕಿದ್ದಾರೆ. ಆಗ ಸಿಟಿ ರವಿ ಇರಲಿಲ್ವಾ ಎಂದು ಪ್ರಶ್ನೆ ಮಾಡಿದ ಅವರು ದೇಶದ ಕಾನೂನು ಎಲ್ಲರಿಗೆ ಒಂದೇ ಅಲ್ವಾ ಎಂದು ಪ್ರಶ್ನಿಸಿದರು.
ಇನ್ನು ಜನಸಂಖ್ಯೆಯನ್ನು ದೇಶದ ಸಂಪನ್ಮೂಲ ಶಕ್ತಿಯಾಗಿ ಬಳಕೆ ಮಾಡಬೇಕಾದದ್ದು ಸರ್ಕಾರದ ಕೆಲಸ. ಆದರೆ ಸರ್ಕಾರವು ತನ್ನ ಆಡಳಿತ ವೈಫಲ್ಯವನ್ನು ಮರೆಮಾಚಲು ಜನಸಂಖ್ಯೆಯನ್ನು ಟಾರ್ಗೆಟ್ ಮಾಡಿರೋದು ದುರಂತ.‌ ಒಂದು ಸರ್ಕಾರವು ಆಡಳಿತ ಮಾಡೋ‌ ಮೊದಲು ದೇಶದ ಜನಸಂಖ್ಯೆಯನ್ನು ಹೇಗೆ ಮಾನವ ಸಂಪನ್ಮೂಲ ಶಕ್ತಿಯಾಗಿ ಬಳಕೆ ಮಾಡಬೇಕೆಂಬುದನ್ನು ಅರಿಯಬೇಕು ಅಂದರು.

Share this Story:

Follow Webdunia kannada

ಮುಂದಿನ ಸುದ್ದಿ

ಗ್ರಾಮಸ್ಥರಿಂದ ಸ್ವಂತ ಹಣದಿಂದ ರಸ್ತೆ ರಿಪೇರಿ