Publish Date: Mon, 16 Mar 2020 (12:10 IST)
Updated Date: Mon, 16 Mar 2020 (12:16 IST)
ಬೆಂಗಳೂರು : ಮಹಾಮಾರಿ ಕೊರೊನಾಗೆ ಔಷಧಿ ಕಂಡುಹಿಡಿಯಲು ತಂಡವೊಂದು ರಚನೆ ಮಾಡಲಾಗಿದ್ದು ಇದರಲ್ಲಿ ಕನ್ನಡಿಗರೊಬ್ಬರು ಇದ್ದಾರೆ ಎಂಬುದಾಗಿ ತಿಳಿದುಬಂದಿದೆ.
ಹೆಮ್ಮಾರಿ ಕೊರೊನಾಗೆ ಲಸಿಕೆ ಕಂಡುಹಿಡಿಯಲು ಯುರೋಪಿಯನ್ ಟಾಸ್ಕ್ ಪೋರ್ಸ್ ಫಾರ್ ಕೊವಿಡ್-19’ ತಂಡ ಎಂಬ 10 ತಂಡಗಳನ್ನು ರಚನೆ ಮಾಡಲಾಗಿದ್ದು, ಕನ್ನಡಿಗರಾದ ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ಮಹದೇಶ್ ಈ ಟಾಸ್ಕ್ ಪೋರ್ಸ್ ತಂಡದಲ್ಲಿದ್ದಾರೆ ಎನ್ನಲಾಗಿದೆ.
ಸಂಶೋಧನೆ ಸಂಬಂಧ 1 ವರ್ಷದಿಂದ ಬಿಲ್ಜಿಯಂನಲ್ಲಿರುವ ಮಹದೇಶ್ ಇದೀಗ ಹೆಮ್ಮಾರಿ ಕೊರೊನಾಗೆ ಲಸಿಕೆ ಕಂಡುಹಿಡಿಯಲಿದ್ದಾರೆ ಎನ್ನಲಾಗಿದ್ದು, ಇದು ಕನ್ನಡಿಗರಿಗೆ ಒಂದು ಹೆಮ್ಮೆಯ ವಿಚಾರವಾಗಿದೆ.