Select Your Language

Notifications

webdunia
webdunia
webdunia
webdunia

ಕೇಂದ್ರ ಸರಕಾರದ ಟೀಕೆಯೇ ಕಾಂಗ್ರೆಸ್ ಸರಕಾರದ ಅಜೆಂಡ: ವಿ.ಸುನೀಲ್‍ಕುಮಾರ್

V Sunil Kumar

Krishnaveni K

ಬೆಂಗಳೂರು , ಶುಕ್ರವಾರ, 23 ಆಗಸ್ಟ್ 2024 (16:36 IST)
ಬೆಂಗಳೂರು: ಬೆಲೆ ಏರಿಕೆ ಮತ್ತು ಕೇಂದ್ರ ಸರಕಾರವನ್ನು ಟೀಕಿಸುವುದು ಈ ಕಾಂಗ್ರೆಸ್ ಸರಕಾರದ ಅಜೆಂಡ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ವಿ.ಸುನೀಲ್‍ಕುಮಾರ್ ಅವರು ಟೀಕಿಸಿದರು.

ನಗರದ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ರಾಜ್ಯದ ಕಾಂಗ್ರೆಸ್ ಸರಕಾರವು ಆರಂಭದ ದಿನದಿಂದಲೂ ಜನಪರ ಯೋಜನೆಗಳನ್ನು ಮಾಡಲೇ ಇಲ್ಲ ಎಂದು ಆಕ್ಷೇಪಿಸಿದರು.

ಕಳೆದ ಕೆಲವು ದಿನಗಳಿಂದ ಕಾಂಗ್ರೆಸ್ ಸರಕಾರದಲ್ಲಿ ಒಂದು ರೀತಿಯ ರಾಜಕೀಯ ಅಸ್ಥಿರತೆ ಕಾಣುತ್ತಿದೆ. ಸ್ವತಃ ಮುಖ್ಯಮಂತ್ರಿಗಳು ಕುರ್ಚಿ ಉಳಿಸಿಕೊಳ್ಳಲು ಪ್ರಯತ್ನದಲ್ಲಿದ್ದಾರೆ. ಸಿಎಂ ಸೇರಿ ಉಳಿದೆಲ್ಲ ಸಚಿವರೂ ಜನಕಲ್ಯಾಣದ ಯೋಜನೆಗಳನ್ನು ಕೈಬಿಟ್ಟಿದ್ದು, ಕೋಮಾ ಪರಿಸ್ಥಿತಿಯಲ್ಲಿ ಸರಕಾರ ಇದೆ ಎಂದು ಟೀಕಿಸಿದರು. ಸಚಿವರು ಜಿಲ್ಲಾ ಪ್ರವಾಸ ನಡೆಸುತ್ತಿಲ್ಲ; ಸಭೆಗಳನ್ನೂ ನಡೆಸುತ್ತಿಲ್ಲ ಎಂದು ಆಕ್ಷೇಪಿಸಿದರು.

ಜನರ ಬವಣೆಗಳನ್ನು ಕೇಳದೇ ಇರುವ ಸ್ಥಿತಿ ಎಲ್ಲ ಜಿಲ್ಲೆ, ಎಲ್ಲ ತಾಲ್ಲೂಕುಗಳಲ್ಲಿದೆ. ಸರಕಾರವೊಂದು ಜೀವಂತವಾಗಿದೆ ಎಂದು ಅನಿಸುತ್ತಿಲ್ಲ. ಆಡಳಿತ ಪಕ್ಷದ ಸದಸ್ಯರೇ ಬೇರೆಬೇರೆ ಪ್ರತಿಭಟನೆಗಳನ್ನು ಮಾಡುತ್ತಿದ್ದಾರೆ. ಜನರ ಪರವಾಗಿ ಯೋಚಿಸದ ಪರಿಸ್ಥಿತಿ ಕರ್ನಾಟಕದಲ್ಲಿ ನಿರ್ಮಾಣವಾದುದು ಶೋಚನೀಯ ಎಂದು ತಿಳಿಸಿದರು.

ನಾವು ರಾಜ್ಯ ಸರಕಾರ ಪತನ ಆಗಬೇಕೆಂದು ಬಯಸುತ್ತಿಲ್ಲ. ಗುರುತರ ಆರೋಪಕ್ಕೆ ಒಳಗಾದ ಮುಖ್ಯಮಂತ್ರಿಗಳು ತನಿಖೆ ಮುಗಿಯುವವರೆಗೆ ರಾಜೀನಾಮೆ ಕೊಡಬೇಕು ಹಾಗೂ ತನಿಖೆ ಎದುರಿಸಲಿ ಎಂದು ನಾವು ಆಗ್ರಹಿಸುತ್ತಿದ್ದೇವೆ ಎಂದು ವಿ.ಸುನೀಲ್‍ಕುಮಾರ್ ಅವರು ಸ್ಪಷ್ಟಪಡಿಸಿದರು.
 

Share this Story:

Follow Webdunia kannada

ಮುಂದಿನ ಸುದ್ದಿ

ಆಫ್ರಿಕಾ ಖಂಡವನ್ನೇ ಬೆಚ್ಚಿಬೀಳಿಸಿದ 'ಮಂಕಿಪಾಕ್ಸ್‌' ಬಗ್ಗೆ ಬಿಗ್‌ ಅಪ್‌ಡೇಟ್ ಕೊಟ್ಟ ಸಚಿವ ಶರಣಪ್ರಕಾಶ್ ಪಾಟೀಲ್