ಒಟ್ಟು ಜಿಎಸ್ಡಿಪಿಯ ಶೇ.25 ರೊಳಗೆ ರಾಜ್ಯದ ಒಟ್ಟು ಸಾಲವಿರಬೇಕು ಎಂಬ ನಿಯಮವಿದೆ. ಈ ನಿಯಮವನ್ನು ಪಾಲಿಸಲಾಗಿರುವುದರಿಂದ ಈ ಬಾರಿಯ ಬಜೆಟ್ ಸರ್ಪ್ಲಸ್ ಬಜೆಟ್ ಆಗಿದೆ.
ಕೋವಿಡ್ಗೂ ಮುನ್ನ ಹಾಗೂ ನಂತರದ ಆರ್ಥಿಕತೆ ಹೋಲಿಸುವುದು ಸೂಕ್ತವಲ್ಲ. ಕೋವಿಡ್ ಸಂದರ್ಭದಲ್ಲಿ ಆರ್ಥಿಕ ಹಿಂಜರಿಕೆಯಾಯಿತು.
ನನ್ನ ಅವಧಿಯಲ್ಲಿ ಹೆಚ್ಚಿನ ಸಾಲ ಪಡೆಯುವ ಅವಕಾಶವಿದ್ದರೂ, ಸಾಲದ ಮೊತ್ತವನ್ನು ಕೇವಲ 67 ಸಾವಿರ ಕೋಟಿ ಸೀಮಿತಗೊಳಿಸಿದ್ದೇನೆ. ಈ ಸಾಲವನ್ನು ಕೇವಲ ಬಂಡವಾಳ ವೆಚ್ಚಗಳಿಗೆ ಬಳಕೆಯಾಗಿದೆ ಎಂದು ಮಾಹಿತಿ ನೀಡಿದರು.