Select Your Language

Notifications

webdunia
webdunia
webdunia
webdunia

ತಾಯಿ ನೋಡಿಕೊಳ್ಳುವ ವಿಚಾರದಲ್ಲಿ ಗಲಾಟೆ- ಮನನೊಂದು ತಾಯಿಮಗ ಆತ್ಮಹತ್ಯೆ

Uproar over taking care of the mother
bangalore , ಭಾನುವಾರ, 13 ನವೆಂಬರ್ 2022 (20:38 IST)
ತಾಯಿ ನೋಡಿಕೊಳ್ಳುವ ವಿಚಾರದಲ್ಲಿ ಪತ್ನಿಯೊಂದಿಗೆ ನಡೆದ‌ ಗಲಾಟೆಯಾಗಿ ಮನನೊಂದು ತಾಯಿ-ಮಗ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ ರಾಜಗೋಪಾಲನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಂದು ಮಧ್ಯಾಹ್ನ ನಡೆದಿದೆ.
ಭಾಗ್ಯಮ್ಮ (57) ಹಾಗೂ ಶ್ರೀನಿವಾಸ್ (33)  ಆತ್ಮಹತ್ಯೆ ಶರಣಾದ ತಾಯಿ-ಮಗ. ಘಟನೆ ಬೆಳಕಿಗೆ ಬರುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿ ಪರಿಶೀಲಿಸಿದ ಪೊಲೀಸರು ಮರಣೋತ್ತರ ಪರೀಕ್ಷೆಗಾಗಿ ಮೃತದೇಹಗಳನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಿದ್ದಾರೆ.
ಹೆಗ್ಗನಹಳ್ಳಿಯ ಶ್ರೀಗಂಧನಗರದಲ್ಲಿ ವಾಸವಾಗಿದ್ದ ಶ್ರೀನಿವಾಸ್, ಕಳೆದ  8 ವರ್ಷಗಳ ಹಿಂದೆ ಸಂಧ್ಯಾ ಎಂಬಾಕೆಯೊಂದಿಗೆ ವಿವಾಹವಾಗಿದ್ದ. ದಂಪತಿಗೆ ಆರು ವರ್ಷದ ಮಗನಿದ್ದಾನೆ. ಕಳೆದ ಎರಡು ತಿಂಗಳ ಹಿಂದೆ ಶ್ರೀನಿವಾಸ್, ವಯಸ್ಸಾದ ತನ್ನ ತಾಯಿಯನ್ನು ಕರೆತಂದು ಇರಿಸಿಕೊಂಡಿದ್ದ. ಇದಕ್ಕೆ ಪತ್ನಿ ಗಂಡನೊಂದಿಗೆ ಮುನಿಸಿಕೊಂಡಿದ್ದಳು ಎನ್ನಲಾಗಿದೆ.  ದಂಪತಿ‌ ನಡುವೆ ಪ್ರತಿದಿನ ಜಗಳವಾಗುತಿತ್ತು. ನಮಗೆ ಇರುವುದಕ್ಕೆ ಕಷ್ಟ..‌ಇನ್ನೂ ತಾಯಿಯನ್ನು ಕರೆದುಕೊಂಡು ಬಂದಿದ್ದೀಯಾ ಎಂದು ಪತಿಯೊಂದಿಗೆ ಜಗಳವಾಡುತ್ತಿದ್ದಳು ಎನ್ನಲಾಗಿದೆ. ಕೌಟುಂಬಿಕ ಕಲಹದಿಂದ ಮನನೊಂದ ತಾಯಿ-ಮಗ ಇಂದು ಮನೆಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನೆ ಸಂಬಂಧ ರಾಜಗೋಪಾಲನಗರ ಪೊಲೀಸ್ ಠಾಣೆಯಲ್ಲಿ‌ ಪ್ರಕರಣ ದಾಖಲಾಗಿದೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಕಬ್ಬನ್ ಪಾರ್ಕ್ ನಲ್ಲಿ ಮಕ್ಕಳ ದಿನಾಚರಣೆಯ ಸಂಭ್ರಮ