Webdunia - Bharat's app for daily news and videos

Install App

ಬಿಜೆಪಿ, ಕೆಪಿಜೆಪಿ ಬೇಡ ಕಾಂತ.. ನಂದೇ ಪಾರ್ಟಿ ಮಾಡ್ತೀನಿ ಕಾಂತಾ.. ಅಂದರು ಉಪೇಂದ್ರ!

Webdunia
ಮಂಗಳವಾರ, 6 ಮಾರ್ಚ್ 2018 (15:56 IST)
ಇನ್ನು ಮುಂದೆ ನನಗೂ ನನ್ನ ಬೆಂಬಲಿಗರಿಗೂ ಕೆಪಿಜೆಪಿ ಜತೆ ಯಾವುದೇ ಸಂಬಂಧವಿಲ್ಲ. ನಾವೆಲ್ಲರೂ ಪಕ್ಷಕ್ಕೆ ರಾಜೀನಾಮೆ ನೀಡಿದ್ದೇವೆ. ಬೆಂಬಲಿಗರ ಸಹಾಯದೊಂದಿಗೆ ಹೊಸ ಪಕ್ಷ ಸ್ಥಾಪನೆ ಮಾಡುತ್ತಿದ್ದೇವೆ ಎಂದು ಉಪೇಂದ್ರ ತಮ್ಮ ರೆಸಾರ್ಟ್ ನಲ್ಲಿ ಮಾಧ್ಯಮಗಳಿಗೆ ಹೇಳಿದ್ದಾರೆ.
ನಮ್ಮ ಹೊಸ ಪಕ್ಷ ಪ್ರಜಾಕೀಯ ಪರಿಕಲ್ಪನೆಯಲ್ಲಿರುತ್ತದೆ. ಆದಷ್ಟು ಬೇಗ ಹೊಸ ಪಕ್ಷ ಸ್ಥಾಪನೆ ಮಾಡುತ್ತೇವೆ. ಇಂದಿನಿಂದಲೇ ಆ ಕೆಲಸ ಮಾಡುತ್ತೇವೆ ಎಂದಿದ್ದಾರೆ.
 
ಜನರಿಗೆ ಬೇಕಾದ ಆರೋಗ್ಯ, ಶಿಕ್ಷಣ ಮುಂತಾದ ಸೌಲಭ್ಯಗಳನ್ನು ಕೊಡಿಸುವುದೇ ನಮ್ಮ ಗುರಿಯಾಗಿರುತ್ತದೆ. ನಮ್ಮ ಪ್ರಣಾಳಿಕೆ, ಅಭ್ಯರ್ಥಿಗಳು ಎಲ್ಲರೂ ರೆಡಿ ಇದ್ದಾರೆ. ಈ ಚುನಾವಣೆಯಲ್ಲೇ ಎಲ್ಲಾ ಸ್ಥಾನಗಳಲ್ಲೂ ಸ್ಪರ್ಧಿಸುತ್ತೇವೆ ಎಂದು ಉಪೇಂದ್ರ ಸ್ಪಷ್ಟವಾಗಿ ಹೇಳಿದ್ದಾರೆ.
 
ಹೀಗಾಗಿ ಈ ಚುನಾವಣೆಗೆ ಮೊದಲು ತಮ್ಮ ಬೆಂಬಲಿಗರ ಜತೆ ಹೊಸ ಪಕ್ಷದೊಂದಿಗೆ ಸಕ್ರಿಯ ರಾಜಕಾರಣಕ್ಕೆ ಉಪೇಂದ್ರ ಮರಳಲಿದ್ದಾರೆ. ಬೆಂಬಲಿಗರ ಜತೆ ತಮ್ಮ ರೆಸಾರ್ಟ್ ನಲ್ಲಿ ಸಭೆ ನಡೆಸಿ ಈ ತೀರ್ಮಾನಕ್ಕೆ ಬಂದಿದ್ದಾರೆ.
 
ಏನಿದು ಪ್ರಜಾಕೀಯ? ರಾಜಕೀಯವಲ್ಲ ಅರ್ಥ ಮಾಡ್ಕೊಳ್ಳಿ..!
 
ದಯವಿಟ್ಟು ಅರ್ಥ ಮಾಡ್ಕೊಳ್ಳಿ.. ರಾಜಕೀಯ, ಪ್ರಜಾಕೀಯ ಬೇರೆ ಬೇರೆನೇ.. ಎಂದು ನಟ ಉಪೇಂದ್ರ ಸ್ಪಷ್ಟನೆ ಕೊಟ್ಟಿದ್ದಾರೆ.
 
ಹಾಗಿದ್ದರೆ ಉಪೇಂದ್ರ ಹೇಳುವ ಪ್ರಜಾಕೀಯ ಎಂದರೇನು?
 
ಇಲ್ಲಿ ಪ್ರಜೆಗಳೇ ಎಲ್ಲವನ್ನೂ ನಿರ್ಧಾರ ಮಾಡುತ್ತಾರೆ. ಜನ ನಾಯಕರಲ್ಲ. ಉದಾಹರಣೆಗೆ ಒಬ್ಬ ಪೊಲೀಸ್ ಅಧಿಕಾರಿ ವರ್ಗಾವಣೆ ಆಗಬೇಕು ಎಂದರೆ ಜನರೇ ನೇರವಾಗಿ ನಿರ್ಧರಿಸಬೇಕು. ಅವರಿಗೇ ಅಧಿಕಾರಿಗಳನ್ನು ವರ್ಗಾವಣೆ ಮಾಡುವ ಅಧಿಕಾರ ಇರಬೇಕು. ಇಲ್ಲಿ ಯಾರೂ ನಾಯಕರಿಲ್ಲ. ಜನ ಸಾಮಾನ್ಯರೇ ತಮಗೆ ಏನು ಬೇಕು ಎನ್ನುವುದನ್ನು ನಿರ್ಧರಿಸಬೇಕು.
 
ಹೀಗೆಂದು ಉಪೇಂದ್ರ ಸ್ಪಷ್ಟನೆ ಕೊಟ್ಟಿದ್ದಾರೆ. ಹಾಗಿದ್ದರೆ ಇದೆಲ್ಲಾ ನನಸಾಗೋದು ಯಾವಾಗ? ಇವತ್ತಿಂದಲೇ ಕೆಲಸ ಶುರು ಮಾಡಿದ್ದೇವೆ. ಸುಮಾರು 200 ಕ್ಕೂ ಹೆಚ್ಚು ಜನ ಅಭ್ಯರ್ಥಿಗಳು ನಮ್ಮಲ್ಲಿ ರೆಡಿ ಇದ್ದಾರೆ. ಶೀಘ್ರದಲ್ಲೇ ಹೊಸ ಪಕ್ಷ ಸ್ಥಾಪನೆಯೊಂದಿಗೆ ನಿಮ್ಮ ಮುಂದೆ ಬರುತ್ತೇವೆ ಎಂದು ಉಪೇಂದ್ರ ಹೇಳಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಧರ್ಮಸ್ಥಳ: 15 ಶವ ಹೂತಿಟ್ಟ ಸ್ಥಳವನ್ನು ಗುರುತಿಸಿದ ದೂರುದಾರ, ಪ್ರದೇಶಕ್ಕೆ ಗನ್‌ಮ್ಯಾನ್ ಭದ್ರತೆ

ನಾಳೆ ನಾಗರಪಂಚಮಿ: ನಾಗದೋಷಗಳಿಗೆ ಈ ದಿನ ವಿಶೇಷ ಪೂಜೆ ನೆರವೇರಿಸಿದ್ರೆ ದೂರವಾಗುತ್ತೆ ಸಂಕಷ್ಟ

ಕಾಲ್ತುಳಿತ ಪ್ರಕರಣ: 52 ದಿನಗಳ ಬಳಿಕ ಬಿ ದಯಾನಂದ್ ಸೇರಿ ನಾಲ್ವರು ಪೊಲೀಸ್ ಅಧಿಕಾರಿ ಅಮಾನತು ಹಿಂಪಡೆದ ಸರ್ಕಾರ

ಯೂರಿಯಾ ಕೊರತೆ ವಿಚಾರದಲ್ಲಿ ಬಿಜೆಪಿಗೆ ಸವಾಲೆಸೆದ ಕೃಷಿ ಸಚಿವ ಚಲುವರಾಯಸ್ವಾಮಿ

ಬ್ಯಾಂಕಾಕ್‌ನ ಮಾರುಕಟ್ಟೆಯಲ್ಲಿ ಗುಂಡಿನ ದಾಳಿ: ದಾಳಿಕೋರ ಸೇರಿ 6 ಮಂದಿ ಸಾವು

ಮುಂದಿನ ಸುದ್ದಿ
Show comments