Publish Date: Wed, 20 Nov 2019 (19:18 IST)
Updated Date: Wed, 20 Nov 2019 (19:19 IST)
ವಿಶ್ವವಿಖ್ಯಾತ ಆಗ್ರಾ ಹೆಸರನ್ನು ಬದಲು ಮಾಡಲು ಉತ್ತರ ಪ್ರದೇಶದ ಸರಕಾರ ಮುಂದಾಗಿದೆ.
ತಾಜಮಹಲ್ ಹೊಂದಿರೋ ಆಗ್ರಾ ಹೆಸರನ್ನು ಇನ್ನು ಮುಂದೆ ಅಗ್ರವಾನ್ ಎಂಬುದಾಗಿ ಪುನರ್ ನಾಮಕರಣ ಮಾಡಲು ಯುಪಿ ಸರಕಾರ ಚಿಂತನೆ ನಡೆಸಿದೆ.
ಯುಪಿ ಸರಕಾರವು ಡಾ.ಭೀಮರಾವ್ ಅಂಬೇಡ್ಕರ್ ವಿಶ್ವವಿದ್ಯಾಲಯಕ್ಕೆ ಪತ್ರ ಬರೆದಿದ್ದು, ಆಗ್ರಾ ಕುರಿತಾಗಿ ಇರೋ ಐತಿಹಾಸಿಕ ದಾಖಲೆಗಳನ್ನು ಕೇಳಿದೆ.
ಹೀಗಾಗಿ ಇತಿಹಾಸವನ್ನು ಪರಾಮರ್ಶಿಸಿ, ಸಂಶೋಧನೆ ನಡೆಸಿ ಸರಕಾರದ ಪತ್ರಕ್ಕೆ ಉತ್ತರ ನೀಡೋದಾಗಿ ಆಗ್ರಾ ವಿವಿಯ ಪ್ರಾಧ್ಯಾಪಕರು ಹೇಳಿದ್ದಾರೆ.