ಅನರ್ಹ ಶಾಸಕ ನಾರಾಯಣಗೌಡ ಚೆಂಗ್ಲು ಗಿರಾಕಿ, ಬಿಜೆಪಿಗೆ ಸೇಲ್ ಆಗವ್ನೆ

Webdunia
ಶುಕ್ರವಾರ, 13 ಸೆಪ್ಟಂಬರ್ 2019 (18:26 IST)
ಮೇಯೋದನ್ನೇ ಅಭ್ಯಾಸ ಮಾಡಿಕೊಂಡಿರೋ ಶಾಸಕ ನಾರಾಯಣಗೌಡ ಕಮಿಷನ್ ಆಸೆಗಾಗಿ ಬಿಜೆಪಿ ಪಕ್ಷಕ್ಕೆ ಸೇಲ್ ಆಗಿದ್ದಾನೆ.
ಚೆಂಗ್ಲು ಗಿರಾಕಿಯಾಗಿರೋ ಈತನಿಗೆ ಬುದ್ಧಿ ಕಲಿಸೋದು ಹೇಗೆ ಅಂತಾ ಗೊತ್ತಿದೆ. ಹೀಗಂತ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಗುಡುಗಿದ್ದಾರೆ.

ಸ್ಥಳೀಯರನ್ನೇ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಿ ಗೆಲ್ಲಿಸುವ ಮೂಲಕ ಮುಂಬೈವಾಲಾನಿಗೆ ತಕ್ಕ ಪಾಠ ಕಲಿಸ್ತೀನಿ ಎಂದು ರಾಜ್ಯದ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಆಕ್ರೋಶ ವ್ಯಕ್ತಪಡಿಸಿದರು.

ಮಂಡ್ಯ ‌ಕೆ.ಆರ್.ಪೇಟೆ ಪಟ್ಟಣದಲ್ಲಿ ನಡೆದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ನಾರಾಯಣಗೌಡನಿಗೆ ಪಕ್ಷದ ಟಿಕೇಟ್ ನೀಡಿ ಅಭ್ಯರ್ಥಿ ಮಾಡಬೇಡಿ, ಅವನು ಒಳ್ಳೆಯವನಲ್ಲಾ, ಹೋಟೆಲ್ ಗಿರಾಕಿ, ಚೆಂಗ್ಲು ಬಿದ್ದವನೆ ಅಂತಾ ಹೇಳಿದ್ದೆ.

ಹೆಚ್.ಡಿ. ಕುಮಾರಸ್ವಾಮಿಗೆ ಒಳ್ಳೇದು ಯಾವುದು, ಕೆಟ್ಟದ್ದು ಯಾವುದು ಅನ್ನೋದೇ ಗೊತ್ತಿಲ್ಲ. ಬೆಳ್ಳಗಿರೋದೆಲ್ಲಾ ಹಾಲು ಅಂತಾ ನಂಬಿಕೊಂಡ. ಈಗ ನಾರಾಯಣಗೌಡನ ಬಣ್ಣ ಬಯಲಾದಮೇಲೆ ಈಗ ಪಶ್ಚಾತ್ತಾಪ ಪಡ್ತಿದ್ದಾನೆ. ಅದಕ್ಕೇ ಇವತ್ತು ಕಾರ್ಯಕರ್ತರ ಸಭೆಗೆ ಬಂದಿಲ್ಲಾ ಎಂದ್ರು.
ಮುಂಬೈನಲ್ಲಿ ಟೀ ಮಾರಿಕೊಂಡು ಉದ್ಯಮಿಯಾಗಿ ಬಂದು ಜೆಡಿಎಸ್ ಪಕ್ಷಕ್ಕೆ ದ್ರೋಹ ಮಾಡಿ ಹೋಗಿರುವ ಈತನಿಗೆ ಕಾರ್ಯಕರ್ತರು ತಕ್ಕಪಾಠ ಕಲಿಸಬೇಕು ಎಂದ್ರು.

ಅನರ್ಹ ಶಾಸಕ ನಾರಾಯಣಗೌಡನ ಮಾತು ಕೇಳಿಕೊಂಡು ಮಂಡ್ಯ ಜಿಲ್ಲಾಧಿಕಾರಿ ನಮ್ಮ ಪಕ್ಷದ ಮುಖಂಡ, ಜಿಲ್ಲಾ ಪಂಚಾಯತ ಸದಸ್ಯ ಹೆಚ್.ಟಿ.ಮಂಜು ಅವರ ಕಾನೂನು ಬದ್ಧವಾದ ಜಲ್ಲಿ ಕ್ರಷರ್ ಅನ್ನು ಸೀಜ್ ಮಾಡಿ ತೊಂದರೆ ಕೊಡ್ತಿದ್ದಾರೆ.

ಇಲ್ಲಿನ ತಹಶೀಲ್ದಾರ್ ಮತ್ತು ಜಿಲ್ಲಾಧಿಕಾರಿಗೆ ಬುದ್ಧಿ ಕಲಿಸ್ತೀನಿ ಅಂತ ಕಿಡಿಕಾರಿದ್ರು.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೇಡಿನ ರಾಜಕಾರಣ ಮಾಡ್ತಿದ್ದಾರೆ.

ನಾನು ಮಂಜೂರು ಮಾಡಿ ಭೂಮಿಪೂಜೆ ಮಾಡಿರೋ ಕೆಲಸ ಕಾರ್ಯಗಳಿಗೆ ತಡೆಯೊಡ್ಡುತ್ತಿದ್ದಾರೆ. 
ನಾನು ರೇವಣ್ಣ ಅದ್ಯಾಗೆ ಕೆಲಸ ನಿಲ್ಲಿಸ್ತಾರೋ ನೋಡ್ತೀನಿ ಅಂತ ಸವಾಲು ಹಾಕಿದ್ರು.


ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ನಿಮ್ ಥರಾ ಟರ್ಪಲ್ ಹಾಕಿ ಬಡತನ ಮುಚ್ಚಿಡಲ್ಲ: ಬಿಜೆಪಿಗೆ ಟಾಂಗ್ ಕೊಟ್ಟ ಪ್ರಿಯಾಂಕ್ ಖರ್ಗೆ

ರೈತರಿಗಾಗಿ ನಾಳೆ ನನ್ನ ಜನ್ಮದಿನವಾಗಿದ್ದರೂ ಹೋರಾಟಕ್ಕೆ ರೆಡಿ: ಬಿವೈ ವಿಜಯೇಂದ್ರ

ಅತ್ಯಂತ ನಿಷ್ಠಾವಂತ ರಾಜಕಾರಣಿ: ಹೆಚ್‌ವೈ ಮೇಟಿ ನಿಧನಕ್ಕೆ ಸಿಎಂ ಸಿದ್ದರಾಮಯ್ಯ ಸಂತಾಪ

ಬಿಹಾರ ಚುನಾವಣೆ: ರಾಜ್ಯದಲ್ಲಿರುವ ಬಿಹಾರಿಗಳಿಗೆ ವೇತನ ಸಹಿತ ರಜೆಗೆ ಶಿವಕುಮಾರ್ ಮನವಿ

ಉಲಾನ್‌ಬಾತರ್‌ನಲ್ಲಿ ಸಿಲುಕಿಕೊಂಡಿರುವ ಪ್ರಯಾಣಿಕರನ್ನು ಕರೆತರಲು ಹೊರಟ ಮತ್ತೊಂದು AI ವಿಮಾನ

ಮುಂದಿನ ಸುದ್ದಿ
Show comments