ಬೆಂಬಿಡದ ಮುಂಬೈ ಮಾರಿ : ಈ ಜಿಲ್ಲೆಗೆ ತಂದಿಟ್ಟಿದೆ ‘ವರಿ’

ಶನಿವಾರ, 23 ಮೇ 2020 (19:45 IST)
ಕೊರೊನಾ ಮಾರಿ ಈ ಜಿಲ್ಲೆಯನ್ನು ಬೆಂಬಿಡದೆ ಕಾಡುತ್ತಿದ್ದು ಒಂದೇ ದಿನ 28 ಪಾಸಿಟಿವ್ ಕೇಸ್ ಗಳು ಪತ್ತೆಯಾಗಿವೆ.

ಮುಂಬೈ ಕೊರೊನಾ ಮಾರಿ ಮಂಡ್ಯ ಜಿಲ್ಲೆಯನ್ನು ಬೆಂಬಿಡದೆ ಕಾಡುತ್ತಿದೆ. ಮುಂಬೈನಿಂದ ವಲಸೆ ಬಂದ ಕೆ.ಆರ್.ಪೇಟೆ ಮೂಲದ 28 ಮಂದಿಗೆ ಕೊರೊನಾ ಪಾಸಿಟಿವ್ ದೃಢ ಪಟ್ಟಿದ್ದು ಇದರೊಂದಿಗೆ ಮಂಡ್ಯ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 237 ಕ್ಕೆ ಏರಿದೆ.

ಇವರೆಲ್ಲಾ ಮುಂಬೈನ ಅಂಧೇರಿ, ನೆಹರು ನಗರ, ಕಿಸಾನ್ ನಗರ, ಅನುಮಾನ್ ಡಿಗ್ರಿ, ಮುಂಬೈ, ಇಂದಿರಾ ನಗರ, ಚೆರಿಮಿರ್ಲೆ, ಸಾಂತಾಕ್ರೋಸ್, ಬಾದಲ್ ನಗರ ಸೇರಿದಂತೆ ವಿವಿಧೆಡೆ ವಾಸವಾಗಿದ್ದವರು.

ಇಬ್ಬರು ವ್ಯಕ್ತಿಗಳು ಹೋಟೆಲ್ ನಲ್ಲಿ ಸಹಾಯಕರಾಗಿ, ಬಾರ್ ಮತ್ತು ವೈನ್ ಸ್ಟೋರ್ ಗಳಲ್ಲಿ, ಚಾಲಕರಾಗಿ  ಉದ್ಯೋಗ ಮಾಡಿಕೊಂಡಿದ್ದು, ಮಹಿಳೆಯರು ಗೃಹಿಣಿಯರಾಗಿದ್ದಾರೆ. ಬಾಲಕ ಬಾಲಕಿಯರು ವಿದ್ಯಾರ್ಥಿಗಳಾಗಿದ್ದಾರೆಂದು ಮಂಡ್ಯ ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ 15 ಜನ ಕುಖ್ಯಾತ ದರೋಡೆಕೋರರ ಬಂಧನ