ಹೊರ ದೇಶದಲ್ಲಿ ಓದಲು ಇಚ್ಚಿಸುವ ವಿದ್ಯಾರ್ಥಿಗಳಿಗೆ ಅಂಕಪಟ್ಟಿ ಸಂಕಷ್ಟ ಎದುರಾಗಿದೆ.ಸಿಇಟಿ, ನೀಟ್ ಪರೀಕ್ಷೆ , ಉದ್ಯೋಗ ಪಡೆಯಲು ಬೇಕು ಭೌತಿಕ ಅಂಕಪಟ್ಟಿ ಹೈಕೋರ್ಟ್, ರಾಜ್ಯಪಾಲರ ಆದೇಶ ಕೊಟ್ರೂ ವಿವಿಗಳು ಮೌನವಾಗಿದೆ.
ವಿದ್ಯಾರ್ಥಿಗಳ ಅಂಕಪಟ್ಟಿ ಡಿಜಿ ಲಾಕರ್ ಅಪ್ ಲೋಡ್ ಮಾಡಲು ಈ ಮೊದಲು ಯುಜಿಸಿ ಸೂಚನೆ ನೀಡಿದ ಹಿನ್ನಲೆಯಲ್ಲಿ ಇದರ ಜೊತೆ ಭೌತಿಕವಾಗಿ ಅಂಕಪಟ್ಟಿ ನೀಡುವಂತೆ ಇತ್ತೀಚೆಗೆ ಹೈಕೋರ್ಟ್ ಸೂಚನೆ ನೀಡಿದೆ. ಆದ್ರೆ ರಾಜ್ಯದ ಎಲ್ಲ ವಿವಿಗಳಿಗೆ ರಾಜ್ಯಪಾಲರಿಂದ ಆದೇಶಆದರೆ ರಾಜ್ಯದ ಬಹುತೇಕ ವಿವಿಯಲ್ಲಿ ಈ ನಿಯಮ ಪಾಲನೆಯಾಗುತ್ತಿಲ್ಲ.ಡಿಜಿ ಲಾಕರ್ ಜೊತೆ ಹಾರ್ಡ್ ಕೊಡಲು ವಿವಿ ನಕಾರಹಾರ್ಡ್ ಕಾಪಿ ಮಾರ್ಕ್ಸ್ ಕಾರ್ಡ್ ಕೊಡಲು ಸತಾಯಿಸುತ್ತಿರುವ ವಿವಿಗಳುಅಂಕಪಟ್ಟಿ ಇದ್ರೆ ಮಾತ್ರ ಸಿಇಟಿ, ನೀಟ್ ಪರೀಕ್ಷೆ ಬರೆಯಲು ಅವಕಾಶ ಎಂದು ಹೇಳುತ್ತ ಇತ್ತೀಚಿನ ಕೆಇಎ ನೋಟಿಫಿಕೇಷನ್ ನಲ್ಲೂ ಹಾರ್ಡ್ ಕಾಪಿ ಅಂಕಪಟ್ಟಿ ಸಲ್ಲಿಸಲು ಸೂಚನೆ ನೀಡಿದೆ.
ಇನ್ನು ಈ ಸಂಬಂಧ ವಿದ್ಯಾರ್ಥಿ ಸಂಘಟನೆಯಿಂದಲೂ ದೂರು ಬಂದಿದ್ದು ವಿದ್ಯಾರ್ಥಿಗಳಿಗೆ ಡಿಜಿ ಲಾಕರ್ ಅಂಕಪಟ್ಟಿ ಅಪ್ ಲೋಡ್ ಮಾಡಲಿಇದರ ಜೊತೆಗೆ ಯಾರಿಗೆ ಅವಶ್ಯಕತೆ ಇದೆಯೋ ಅವರಿಗೆ ಮಾತ್ರ ಹಾರ್ಡ್ ಕಾಪಿ ಕೊಡಲುರಾಜ್ಯಪಾಲರು, ಹಾಗೂ ಹೈಕೋರ್ಟ್ ಆದೇಶ ಹೊರಡಿಸಿದ್ರೂ ವಿವಿಗಳು ಮಾತ್ರ ಹಾರ್ಡ್ ಕಾಪಿಯುಳ್ಳ ಅಂಕಪಟ್ಟಿ ಕೊಡಲು ಹಿಂದೇಟು ಹಾಕುತ್ತಿವೆ ಎಂಬ ಆರೋಪ ಕೇಳಿಬಂದಿದೆ. ವಿವಿಗಳ ಈ ನಿರ್ಧಾರದಿಂದ ವಿದ್ಯಾರ್ಥಿಗಳ ಮುಂದಿನ ಭವಿಷ್ಯ ಹೇಗೆ ಅನ್ನೋದು ಯಕ್ಷ ಪ್ರಶ್ನೆಯಾಗಿ ಕಾಡ್ತಿದೆ.