Select Your Language

Notifications

webdunia
webdunia
webdunia
webdunia

ಸೆನೆಗಲ್ ದೇಶದ ಪೊಲೀಸರ ವಶದಲ್ಲಿ ಭೂಗತ ಪಾತಕಿ ರವಿ ಪೂಜಾರಿ

ಸೆನೆಗಲ್ ದೇಶದ ಪೊಲೀಸರ ವಶದಲ್ಲಿ ಭೂಗತ ಪಾತಕಿ ರವಿ ಪೂಜಾರಿ
ನವದೆಹಲಿ , ಶುಕ್ರವಾರ, 1 ಫೆಬ್ರವರಿ 2019 (08:21 IST)
ನವದೆಹಲಿ : ಮೋಸ್ಟ್ ವಾಂಟೆಡ್ ಕ್ರಿಮಿನಲ್​ಗಳಲ್ಲೊಬ್ಬನಾದ ಭೂಗತ ಪಾತಕಿ ರವಿ ಪೂಜಾರಿ ಅವರನ್ನು ಪಶ್ಚಿಮ ಆಫ್ರಿಕಾದ ಸೆನೆಗಲ್ ದೇಶದ ಪೊಲೀಸರು ಬಂಧಿಸಿದ್ದಾರೆ ಎಂಬುದಾಗಿ ತಿಳಿದುಬಂದಿದೆ.


ಕ್ರಿಮಿನಲ್ ಚಟುವಟಿಕೆ ನಡೆಸುತ್ತಿದ್ದ ರವಿ ಪೂಜಾರಿ ಮೇಲೆ ದೇಶದ ವಿವಿಧ ರಾಜ್ಯದಲ್ಲಿ ಪ್ರಕರಣಗಳು ದಾಖಲಾಗಿತ್ತು. ಬರೋಬ್ಬರಿ 15 ವರ್ಷಗಳಿಂದ ಬೇರೆ ಬೇರೆ ದೇಶಗಳಲ್ಲಿ ತಲೆಮರೆಸಿಕೊಂಡಿದ್ದ ರವಿ ಪೂಜಾರಿಯನ್ನು ಗುರುವಾರ ಸೆನೆಗಲ್ ದೇಶದ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿರುವುದಾಗಿ ಭಾರತ ಸರ್ಕಾರಕ್ಕೆ ಸೆನೆಗಲ್ ಸರ್ಕಾರ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.


ಆದರೆ ಯಾವ ಕಾರಣಕ್ಕಾಗಿ ಬಂಧನ ಮಾಡಲಾಗಿದೆ ಹಾಗೂ ಪೊಲೀಸ್ ಬಂಧನ ಮಾಡಿ ವಿಚಾರಣೆ ನಡೆಸಿದ ಬಳಿಕ ಭಾರತಕ್ಕೆ ಹಸ್ತಾಂತರ ಮಾಡಲಿದ್ದರಾ ಎಂಬ ಬಗ್ಗೆ ಅಧಿಕೃತ ಮಾಹಿತಿ ಇನ್ನು ಲಭ್ಯವಾಗಿಲ್ಲ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಭಾಗ್ಯಗಳ ಹೆಸರಿನಲ್ಲಿ ಸಿದ್ದರಾಮಯ್ಯ ಸಾಲ ಭಾಗ್ಯ ಕೊಟ್ಟಿದ್ದಾರೆ- ಬಿಜೆಪಿ ಸಹ ವಕ್ತಾರ ಆರ್.ರಘು ಆರೋಪ