Publish Date: Mon, 15 Aug 2022 (19:30 IST)
Updated Date: Mon, 15 Aug 2022 (19:43 IST)
ಕೃಷ್ಣರಾಜಪುರದಲ್ಲಿ ಹೊಸದಾಗಿ ಸ್ಕೈವಾಕ್ ಮಾಡಿದ್ದಾರೆ.ಇದು ಮಾಡಿ ಕೇವಲ 8 ತಿಂಗಳಾಗಿದೆ ಅಷ್ಟೇ. ಜನರಿಗೆ ಉಪಯೋಗವಾಗ್ಲಿ ಅಂತಾ ಈ ಸ್ಕೈವಾಕ್ ಮಾಡಿದ್ದಾರೆ. ಈ ಸ್ಕೈವಾಕ್ ಮೇಲಿಂದ ಕೆಳಗೆ ಇಳಿದ್ರೆ ಅಲ್ಲೇ ಬಸ್ ಸ್ಟ್ಯಾಂಡ್ ಸಿಗುತ್ತೆ.ಮಾರ್ಕೆಟ್ ಕೂಡ ಸಿಗುತ್ತೆ.ಆದ್ರೆ ಈ ಸ್ಕೈವಾಕ್ ಮಾರುಕಟ್ಟೆಗಿಂತ ಗಬ್ಬಾಗಿದೆ.
ಹೌದು ಸ್ಕೈವಾಕ್ ನಲ್ಲಿ ಸ್ವಚ್ಛತೆ ಅನ್ನುವುದು ಮರೀಚಿಕೆಯಾಗೋಗಿದೆ.ಅಲ್ಲಲ್ಲೇ ಉಗುಳುತ್ತಾರೆ. ಅಲ್ಲೇ ಕಸ, ಎಲ್ಲಿ ನೋಡಿದ್ರು ಬೇರೆ ಕಸ.ಪಾಪಾ ಕಸದ ನಡುವೆನೇ ವ್ಯಾಪಾರಿಗಳು ವ್ಯಾಪಾರ ಮಾಡ್ತಾರೆ.ನೂರಾರು ಜನರು ಕೂಡ ಓಡಾಡುತ್ತಾರೆ.ಆದ್ರೆ ತುಂಬ ದಿನದಿಂದ ಗಬ್ಬೇದ್ದು ನಾರುತ್ತಿರುವ ಕಸ ಕ್ಲೀನ್ ಮಾಡುವವರೇ ಇಲ್ಲಿ ಇಲ್ಲ.