ಟ್ವಿಟರ್ 8 ಡಾಲರ್ ನಿರ್ಧಾರ ಅಮಾನತು

Webdunia
ಭಾನುವಾರ, 13 ನವೆಂಬರ್ 2022 (15:33 IST)
ಬ್ಲೂಟಿಕ್ ಪಡೆಯಲು 8 ಡಾಲರ್ ಶುಲ್ಕ ವಿಧಿಸಿದ್ದ ಮೈಕ್ರೋ ಬ್ಲಾಗಿಂಗ್ ತಾಣ ಟ್ವಿಟರ್ ಸದ್ಯ ತನ್ನ ನಿರ್ಧಾರವನ್ನು ಅಮಾನತ್ತಿನಲ್ಲಿರಿಸಿದೆ. ನಕಲಿ ಖಾತೆಗಳ ಹಾವಳಿ ಮಿತಿಮೀರಿದ ಕಾರಣ ಚಂದಾದಾರಿಕೆ ಯೋಜನೆಯನ್ನು ಟ್ವಿಟರ್ ಅಮಾನತಿನಲ್ಲಿರಿಸಿದೆ. ಈಗಾಗಲೇ ಚಂದಾ ಮಾಡಿಕೊಂಡವರು ತಮ್ಮ ಖಾತೆಯ ದೃಢೀಕರಣ ಸೌಲಭ್ಯ ಹೊಂದಿರಲಿದ್ದಾರೆ. ಹೈಪ್ರೊಫೈಲ್ ಖಾತೆಗಳಿಗೆ ಅಧಿಕೃತ ಬ್ಯಾಜ್ ನೀಡುವ ವ್ಯವಸ್ಥೆಯನ್ನು ಕಂಪನಿ ಮರಳಿ ಜಾರಿಗೊಳಿಸಿದೆ. ಉದ್ದಿಮೆ ಮತ್ತು ಪ್ರಮುಖ ಮಾಧ್ಯಮ ಸಂಸ್ಥೆಗಳ ಖಾತೆಯ ಕೆಳ ಭಾಗದಲ್ಲಿ ಬೂದುಬಣ್ಣದ ಬ್ಯಾಜ್ ಕಾಣಿಸಲಿದೆ ಎಂದು ಮೂಲಗಳು ತಿಳಿಸಿವೆ. ಖಾತೆಯ ದೃಢೀಕರಣಕ್ಕೆ ಶುಲ್ಕ ಪಾವತಿ ಆಯ್ಕೆ ನೀಡಿದ ಬೆನ್ನಲ್ಲೇ ನಕಲಿ ಖಾತೆಗಳನ್ನು ನಿಭಾಯಿಸುವುದೂ ಟ್ವಿಟರ್​​ಗೆ ಸವಾಲಾಗಿ ಪರಿಣಮಿಸಿತ್ತು. ನಿಂಟೆಂಡೊ ಇಂಕ್ ಎಂಬ ಒಂದು ಖಾತೆಯಲ್ಲಿ ಸೂಪರ್ ಮಾರಿಯೋ ಅಶ್ಲೀಲ ಸಂದೇಶ ಪ್ರದರ್ಶಿಸುತ್ತಿರುವ ಚಿತ್ರ ಪ್ರಕಟಿಸಲಾಗಿತ್ತು. ಮತ್ತೊಂದು ಖ್ಯಾತ ಫಾರ್ಮಾ ಕಂಪನಿಯ ಹೆಸರಿನಲ್ಲಿ ಬೇರೆ ಯಾವುದೋ ನಕಲಿ ಖಾತೆ ಮೂಲಕ ಸುಳ್ಳು ಸಂದೇಶ ಹರಿಬಿಡಲಾಗಿತ್ತು. ಬಳಿಕ ಕಂಪನಿ ಕ್ಷಮೆಯಾಚಿಸಬೇಕಾಗಿ ಬಂದಿತ್ತು ಎಂದು ಮೂಲಗಳು ಹೇಳಿವೆ. ಇನ್ನೊಂದು ಖಾತೆಯಲ್ಲಿ ಟೆಸ್ಲಾದ ಸುರಕ್ಷತಾ ದಾಖಲೆಗಳನ್ನು ಪ್ರಶ್ನಿಸಿ ಗೇಲಿ ಮಾಡಲಾಗಿತ್ತು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ದೆಹಲಿ ಸ್ಫೋಟ ಪ್ರಕರಣ ಮಾಸುವ ಮುನ್ನವೇ ಮತ್ತೊಂದು ಬಾಂಬ್ ಬೆದರಿಕೆ

ರಾಮೇಶ್ವರಂ ಕೆಫೆಯಲ್ಲಿ ದೋಸೆ ಸವಿದ ಉತ್ತರಪ್ರದೇಶ ಮಾಜಿ ಸಿಎಂ ಅಖಿಲೇಶ್ ಯಾದವ್

ಹೈಕಮಾಂಡ್ ಮುಂದೆ ಡಿಕೆ ಶಿವಕುಮಾರ್ ಇಟ್ಟಿರುವ ನಾಲ್ಕು ಡಿಮ್ಯಾಂಡ್ ಗಳೇನು

ಆಂಧ್ರದಲ್ಲಿ 26 ಮಂದಿಯ ಹತ್ಯೆಗೆ ಕಾರಣವಾಗಿದ್ದ ನಕ್ಸಲ್‌ ಮದ್ವಿ ಹಿದ್ಮಾ ಎನ್‌ಕೌಂಟರ್‌ಗೆರ ಬಲಿ

ತಂದೆಗೆ ಹೊಡೆಯುತ್ತಿದ್ದ ಕಳ್ಳನ ಮನಸ್ಸು ಒಂದೇ ಕ್ಷಣದಲ್ಲಿ ಬದಲಾಯಿಸಿ ಮಗಳು: ಮನಕಲಕುವ ವಿಡಿಯೋ

ಮುಂದಿನ ಸುದ್ದಿ
Show comments