Publish Date: Sun, 13 Nov 2022 (11:55 IST)
Updated Date: Sun, 13 Nov 2022 (11:57 IST)
ಕಲಬುರಗಿ : ಅಫಜಲಪುರ ತಾಲೂಕಿನ ಆಳಂದ ಗ್ರಾಮದಲ್ಲಿ ನಡೆದಿದ್ದ ಅತ್ಯಾಚಾರ, ಕೊಲೆ ಪ್ರಕರಣದ ತನಿಖಾ ವರದಿಯನ್ನು 9 ದಿನಗಳಲ್ಲೇ ಬಾಲ ನ್ಯಾಯಮಂಡಳಿಗೆ ಸಲ್ಲಿಸಲಾಗಿದೆ ಎಂದು ಎಸ್ಪಿ ಇಶಾ ಪಂತ್ ತಿಳಿಸಿದ್ದಾರೆ.
ನ.1ರಂದು ಬಹಿರ್ದೆಸೆಗೆ ತೆರಳಿದ್ದ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಲಾಗಿತ್ತು. ಘಟನೆ ನಡೆದ 24 ಗಂಟೆಯಲ್ಲೇ ಆರೋಪಿಗಳನ್ನು ಬಂಧಿಸಿದ್ದ ಪೊಲೀಸರು ಸಾಕ್ಷಿ ಸಮೇತ 9 ದಿನಗಳ ಒಳಗೇ ಬಾಲ ನ್ಯಾಯಮಂಡಳಿಗೆ ವರದಿ ಸಲ್ಲಿಸಲಾಗಿದೆ.
ಅಪರಾಧ ಕೃತ್ಯವೆಸಗಿದ ಬಾಲಕನನ್ನು ತನಿಖಾ ತಂಡ ಕೇವಲ 24 ಗಂಟೆಯಲ್ಲೇ ವಶಕ್ಕೆ ಪಡೆದು, ವಿಚಾರಣೆ ನಡೆಸಿ ಬಾಲ ನ್ಯಾಯ ಮಂಡಳಿ ಮುಂದೆ ಹಾಜರು ಪಡಿಸಲಾಗಿತ್ತು.
ತನಿಖಾ ತಂಡದ ಕಾರ್ಯವನ್ನು ಮೆಚ್ಚಿ ಡಿಜಿ ಮತ್ತು ಐಜಿಪಿಯವರು 1 ಲಕ್ಷ ರೂ. ನಗದು ಬಹುಮಾನ ಘೋಷಿಸಿದ್ದಾರೆ.