ಬೆಂಗಳೂರು: ಕೆಲವು ದಿನಗಳ ಹಿಂದೆ ಕೇರಳ ಸಿಎಂ ಪಿಣರಾಯಿ ವಿಜಯನ್ ಟ್ವೀಟ್ ಮಾಡಿದ ಬೆನ್ನಲ್ಲೇ ಕೋಗಿಲು ಲೇಔಟ್ ನ ಅಕ್ರಮ ವಸತಿ ನಿರ್ಮಾಣ ತೆರವು ಕಾರ್ಯ ಸದ್ದು ಮಾಡಿತ್ತು. ಆದರೆ ಈಗ ನಿವಾಸಿಗಳ ಬಗ್ಗೆ ಶಾಕಿಂಗ್ ಸತ್ಯ ಹೊರಬಿದ್ದಿದೆ.
ಕೇರಳ ಸಿಎಂ ಬೆಂಗಳೂರಿನ ಕೋಗಿಲು ಲೇಔಟ್ ನಿವಾಸಿಗಳನ್ನು ತೆರವುಗೊಳಿಸಿದ್ದಕ್ಕೆ ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯ, ಬುಲ್ಡೋಜರ್ ಸಂಸ್ಕೃತಿ ಎಂದು ಕರ್ನಾಟಕ ಸರ್ಕಾರದ ವಿರುದ್ಧ ಕಿಡಿ ಕಾರಿದ್ದರು. ಇದರ ಬೆನ್ನಲ್ಲೇ ಕರ್ನಾಟಕ ಇಲ್ಲಿನ ನಿವಾಸಿಗಳಿಗೆ ವಿರೋಧದ ನಡುವೆಯೂ ಪುನರ್ವಸತಿ ಕಲ್ಪಿಸಲು ಮುಂದಾಗಿದೆ.
ಆದರೆ ಈಗ ಕೋಗಿಲು ನಿವಾಸಿಗಳ ಬಗ್ಗೆ ಶಾಕಿಂಗ್ ಸತ್ಯ ಹೊರಬೀಳುತ್ತಿದೆ. ಇಲ್ಲಿನ ನಿವಾಸಿಗಳು ಬಡವರು ಎಂದೇ ಎಲ್ಲರೂ ಅಂದುಕೊಂಡಿದ್ದರು. ಆದರೆ ಈಗ ಕೋಗಿಲು ಲೇಔಟ್ ನ ಫಕೀರ್ ಕಾಲೊನಿ ಮತ್ತು ವಸೀಂ ಲೇಔಟ್ ನಲ್ಲಿ ಸರ್ಕಾರೀ ಜಮೀನು ಒತ್ತುವರಿ ಮಾಡಿದವರಿಂದ ಲಕ್ಷ ಲಕ್ಷ ಹಣ ಪಡೆಯಲಾಗಿತ್ತು. ಶೆಡ್ ನಿರ್ಮಾಣ ಮಾಡಿಕೊಳ್ಳಲು ವಿಜಯ್ ಮತ್ತು ರಾಬಿನ್ ಎಂಬವರು ಲಕ್ಷಾಂತರ ರೂಪಾಯಿ ಹಣ ಪಡೆದಿದ್ದರು ಎಂಬ ವಿಚಾರ ಪೊಲೀಸ್ ತನಿಖೆಯಲ್ಲಿ ಹೊರಬಿದ್ದಿದೆ. ಒಂದು ವೇಳೆ ಅವರಿಗೆ ಲಕ್ಷಾಂತರ ರೂಪಾಯಿ ಕೊಡಲು ಸಾಧ್ಯವಾಗಿದೆ ಎಂದರೆ ಅವರು ಬಡವರು ಹೇಗಾಗುತ್ತಾರೆ ಎಂಬ ಪ್ರಶ್ನೆ ಮೂಡಿದೆ. ಇಲ್ಲಿ ತೆರವುಗೊಳಿಸಿದ್ದು ಬಡವರ ಮನೆ ಎನ್ನಲಾಗಿತ್ತು. ಆದರೆ ಇವರೆಲ್ಲಾ ಬಡವರಲ್ಲ ಎಂಬ ಅಂಶ ಹೊರಬಿದ್ದಿದೆ. ಹಾಗಾಗಿ ಇವರಿಗೆ ಪುನರ್ವಸತಿ ಕಲ್ಪಿಸಬೇಕೇ ಎಂಬ ಬಗ್ಗೆ ಈಗ ಚರ್ಚೆ ಶುರುವಾಗಿದೆ.