Publish Date: Sat, 28 Jan 2017 (07:36 IST)
Updated Date: Sat, 28 Jan 2017 (07:42 IST)
ನಗರದ ಎಂ.ಜಿ ರಸ್ತೆಯಲ್ಲಿನ ಪಬ್‌ವೊಂದರಲ್ಲಿ ನಡೆದಿದ್ದ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದ್ದು, ಆರೋಪಿಗಳನ್ನು ಬಿಟ್ಟು ಬಿಡುವಂತೆ ಸಂತ್ರಸ್ತೆಯೇ ಪೊಲೀಸರನ್ನು ಒತ್ತಾಯಿಸುತ್ತಿದ್ದಾಳೆ.
ಜನವರಿ 13 ರಂದು ಕಂಠಪೂರ್ತಿ ಕುಡಿದಿದ್ದ ಯುವತಿಗೆ ಸಹಾಯ ಮಾಡುವ ನೆಪದಲ್ಲಿ ಕರೆದೊಯ್ದಿದ್ದ ಇಬ್ಬರು ಯುವಕರು ಕಾರಿನಲ್ಲಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿ ಕಮ್ಮನಹಳ್ಳಿ ಬಳಿ ಆಕೆಯನ್ನು ಬಿಟ್ಟು ಪರಾರಿಯಾಗಿದ್ದರು.
ತನ್ನ ಮೇಲಾದ ದೌರ್ಜನ್ಯದ ಬಗ್ಗೆ ಯುವತಿಯೇ ಪೊಲೀಸರಿಗೆ ದೂರು ನೀಡಿದ್ದಳು. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಯೆಮೆನ್ ದೇಶದ ಪ್ರಜೆ ಆಯೂಬ್ ಮತ್ತು ಟೆಕ್ಕಿ ರಿಕಿ ಉತ್ತಪ್ಪ ಎಂಬುವವರನ್ನು ಬಂಧಿಸಿದ್ದರು.
ಮತ್ತೀಗ ಅವರಿಬ್ಬರು ನನ್ನ ಗೆಳೆಯರಾಗಿದ್ದು, ಯಾವ ತಪ್ಪನ್ನು ಮಾಡಿಲ್ಲ. ಅವರನ್ನು ಬಿಟ್ಟು ಬಿಡಿ ಎಂದು ಸಂತ್ರಸ್ತೆ ಪೊಲೀಸರ ಮೇಲೆ ಒತ್ತಡ ಹೇರುತ್ತಿದ್ದು ಗೊಂದಲಕ್ಕೆ ಎಡೆ ಮಾಡಿಕೊಟ್ಟಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ