Select Your Language

Notifications

webdunia
webdunia
webdunia
Wednesday, 16 April 2025
webdunia

ಕಂಬಳ ಉಳಿಸುವಂತೆ ಒತ್ತಾಯಿಸಿ ಸಾಂಕೇತಿಕ ಪ್ರತಿಭಟನೆ: ಜಯರಾಮ್ ಸೂಡಾ

ಕಂಬಳ
ಬೆಂಗಳೂರು , ಶುಕ್ರವಾರ, 27 ಜನವರಿ 2017 (19:29 IST)
ದಕ್ಷಿಣ ಕನ್ನಡದ ಪಾರಂಪರಿಕ ಕ್ರೀಡೆ ಕಂಬಳವನ್ನು ಉಳಿಸುವಂತೆ ಒತ್ತಾಯಿಸಿ ಜನೆವರಿ 29ರಂದು ತುಳು ಕೂಟದ ವತಿಯಿಂದ ಸಾಂಕೇತಿಕ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ತುಳು ಕೂಟದ ಅಧ್ಯಕ್ಷ ಜಯರಾಮ ಸೂಡಾ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ತಮಿಳುನಾಡಿನ ಜಲ್ಲಿಕಟ್ಟು ಹಾಗೂ ಕಂಬಳಕ್ಕೂ ಹೂಲಿಕೆ ಮಾಡುವುದು ಸರಿಯಲ್ಲ. ಜಲ್ಲಿಕಟ್ಟು ಕ್ರೀಡೆಯಲ್ಲಿ ಸಾವುನೋವು ಸಂಭವಿಸುತ್ತದೆ. ಆದರೆ, ಕಂಬಳ ಕ್ರೀಡೆಯಲ್ಲಿ ಹಿಂದೆಂದೂ ಸಾವುನೋವು ಸಂಭವಿಸಿರುವ ಉದಾಹರಣೆ ಇಲ್ಲ ಎಂದರು. 
 
ಜನವರಿ 31ರಂದು ಕಂಬಳ ಕ್ರೀಡೆ ಕುರಿತಾಗಿ ಕೋರ್ಟ್ ಮಧ್ಯಂತರ ತೀರ್ಪು ಪ್ರಕಟಿಸಲಿದೆ. ಒಂದು ವೇಳೆ ಕ್ರೀಡೆ ನಿಷೇಧದ ಪರವಾಗಿ ಆದೇಶ ಬಂದರೆ ತುಳು ಕೂಟದ ವತಿಯಿಂದ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರ ನೀಡಿದರು.
 
ಕಂಬಳ ಕುರಿತಂತೆ ಸುಗ್ರೀವಾಜ್ಞೆ ಹೊರಡಿಸಿ ಶಾಸನ ರೂಪಿಸಬೇಕು ಎಂದು ತುಳು ಕೂಟದ ಅಧ್ಯಕ್ಷ ಜಯರಾಮ ಸೂಡಾ ಅವರು ರಾಜ್ಯ ಸರಕಾರವನ್ನು ಒತ್ತಾಯಿಸಿದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಕುಮಾರಸ್ವಾಮಿ ಸಿಎಂ ಆಗಲು ಜೆಡಿಎಸ್ ಉಳಿಸಿ ಎನ್ನುತ್ತಿಲ್ಲ: ದೇವೇಗೌಡ ಸ್ಪಷ್ಟನೆ