Select Your Language

Notifications

webdunia
webdunia
webdunia
webdunia

ಉತ್ತರಪ್ರದೇಶದ ಗಂಗಾ ಆರತಿ ಮಾದರಿಯಲ್ಲಿ ರಾಜ್ಯದಲ್ಲಿ ತುಂಗಾ ಆರತಿ: ಸಿಎಂ ಬೊಮ್ಮಾಯಿ

ಉತ್ತರಪ್ರದೇಶದ ಗಂಗಾ ಆರತಿ ಮಾದರಿಯಲ್ಲಿ ರಾಜ್ಯದಲ್ಲಿ ತುಂಗಾ ಆರತಿ: ಸಿಎಂ ಬೊಮ್ಮಾಯಿ
bangalore , ಸೋಮವಾರ, 21 ಫೆಬ್ರವರಿ 2022 (18:21 IST)
ಉತ್ತರ ಪ್ರದೇಶದಲ್ಲಿ ನಡೆಯುವ ಗಂಗಾ ಆರತಿ ಮಾದರಿಯಲ್ಲಿ ರಾಜ್ಯದಲ್ಲಿ ತುಂಗಾ ಆರತಿ ನಡೆಸಲಾಗುವುದು ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ತುಂಗಭದ್ರಾ ನದಿ ದಡದಲ್ಲಿ ತುಂಗಾ ಆರತಿ ಮಂಟಪ ನಿರ್ಮಾಣಕ್ಕೆ ಸಿಎಂ ಬೊಮ್ಮಾಯಿ ಶಂಕುಸ್ಥಾಪನೆ ನೆರವೇರಿಸಿದ್ದಾರೆ. ದಾವಣಗೆರೆಯ ಹರಿಹರದಲ್ಲಿ ಸುಮಾರು 30 ಕೋಟಿ ರೂ. ವೆಚ್ಚದಲ್ಲಿ ವಾರಣಾಸಿಯ ಗಂಗಾರತಿ ಮಾದರಿಯಲ್ಲಿ ತುಂಗಭದ್ರಾ ಆರತಿ ಮಂಟಪ ನಿರ್ಮಾಣವಾಗಲಿದೆ.
ಹರಿಹರ ಪುಣ್ಯಕ್ಷೇತ್ರ. ಈ ಕಾರ್ಯಕ್ರಮ ಕೂಡ ಅಪರೂಪವಾದ್ದು, ನದಿ ತೀರಗಳಲ್ಲಿ ಮಂಟಪಗಳನ್ನು ನಿರ್ಮಾಣ ಮಾಡುವ ಮೂಲಕ ಯಾತ್ರಾ ಸ್ಥಳವಾಗಿ ಹರಿಹರ ಇನ್ನೂ ಹೆಚ್ಚು ಪ್ರಸಿದ್ಧಿ ಪಡೆಯಲಿದೆ. ಪ್ರವಾಸೋದ್ಯಮ ಬೆಳೆದು ಉದ್ಯೋಗವಾಕಾಶಗಳೂ ಹೆಚ್ಚಲಿವೆ ಎಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ನೇಣಿಗೆ ಶರಣಾದ ಅರಣ್ಯ ರಕ್ಷಕ ಕುಟುಂಬ