Select Your Language

Notifications

webdunia
webdunia
webdunia
webdunia

ಸಿದ್ದರಾಮಯ್ಯ ಸಾಬ್ ಎಂದು ಕೂಗಿದ ಮಹಿಳೆ ರಾಬಿಯಾಗೆ ಫಟಾಫಟ್ ನಿವೇಶನ ಮಂಜೂರು

Siddaramaiah

Krishnaveni K

ತುಮಕೂರು , ಬುಧವಾರ, 4 ಡಿಸೆಂಬರ್ 2024 (12:44 IST)
ತುಮಕೂರು: ಎಷ್ಟೋ ಜನರಿಗೆ ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿ ವರ್ಷಗಳೇ ಕಳೆದರೂ ಮಂಜೂರಾಗದೇ ಕಚೇರಿಗಳಿಗೆ ಅಲೆದಾಡಬೇಕಾಗುತ್ತದೆ. ಆದರೆ ಇಲ್ಲೊಬ್ಬ ಮಹಿಳೆ ಸಿಎಂ ಸಿದ್ದರಾಮಯ್ಯನವರನ್ನು ಸಿದ್ದರಾಮಯ್ಯ ಸಾಬ್ ಎಂದು ಕರೆದು ಗಮನ ಸೆಳೆದು ತನಗೆ ಬೇಕಾದ ಸೈಟು ಗಿಟ್ಟಿಸಿಕೊಂಡಿದ್ದಾಳೆ.

ಇತ್ತೀಚೆಗೆ ಸಿಎಂ ಸಿದ್ದರಾಮಯ್ಯ ತುಮಕೂರಿಗೆ ಕಾರ್ಯಕ್ರಮ ನಿಮಿತ್ತ ತೆರಳಿದ್ದರು. ಕಾರ್ಯಕ್ರಮಕ್ಕೆ ಬಂದಿದ್ದ ರಾಬಿಯಾ ತನಗೆ ನಿವೇಶನ ಮಂಜೂರು ಮಾಡಿಕೊಡುವಂತೆ ಸಿಎಂ ಸಿದ್ದರಾಮಯ್ಯರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದಳು ಪ್ರಯತ್ನಿಸಿದ್ದಳು. ಆದರೆ ಸಿಎಂ ಭೇಟಿಯಾಗಲು ಸಾಧ್ಯವಾಗಲಿಲ್ಲ.

ಹೀಗಾಗಿ ಸಿದ್ದರಾಮಯ್ಯ ವೇದಿಕೆ ಬಿಟ್ಟು ತೆರಳುತ್ತಿದ್ದಾಗ ಪೊಲೀಸರು ಅಡ್ಡಗಟ್ಟಿದರೂ ಬಿಡದೇ ಸಿದ್ದರಾಮಯ್ಯ ಸಾಬ್ ಎಂದು ಜೋರಾಗಿ ಕೂಗಿದ್ದಾಳೆ. ಆಕೆ ಕೂಗಿದ್ದನ್ನು ಗಮನಿಸಿದ ಸಿಎಂ ಸಿದ್ದರಾಮಯ್ಯ ಜಿಲ್ಲಾಧಿಕಾರಿಗಳಿಗೆ ಆಕೆಯ ಸಮಸ್ಯೆಯೇನೆಂದು ತಿಳಿದುಕೊಂಡು ಪರಿಹಾರ ನೀಡುವಂತೆ ಸೂಚಿಸಿದ್ದರು.

ಸಿಎಂ ಸೂಚನೆ ನೀಡಿದ ಬೆನ್ನಲ್ಲೇ ಕಾರ್ಯಪ್ರವೃತ್ತವಾದ ಜಿಲ್ಲಾಡಳಿತ ಆಕೆಯನ್ನು ಸಂಪರ್ಕಿಸಿದೆ. ಸಮಸ್ಯೆ ತಿಳಿದ ಒಂದೇ ದಿನದಲ್ಲಿ ರಾಬಿಯಾಗೆ 20/30 ಅಳತೆಯ ನಿವೇಶನವನ್ನೂ ಮಂಜೂರು ಮಾಡಿದೆ. ರಾಬಿಯಾ ಬಡ ಕುಟುಂಬದವಳಾಗಿದ್ದು, ಆಶ್ರಯ ಯೋಜನೆಯಡಿ ನಿವೇಶನ ನೀಡಲು ಸೆಪ್ಟೆಂಬರ್ 25 ರಂದು ಆಶ್ರಯ ಸಮಿತಿ ನಿರ್ಣಯ ಕೈಗೊಂಡಿತ್ತು. ಆದರೆ ಇದುವರೆಗೆ ಸೈಟು ನೀಡದೇ ಅಧಿಕಾರಿಗಳು ಸತಾಯಿಸಿದ್ದರು. ಹೀಗಾಗಿ ನೇರವಾಗಿ ಸಿದ್ದರಾಮಯ್ಯನವರ ಗಮನ ಸೆಳೆದು ತನಗೆ ಬೇಕಾದ ಸೈಟು ಗಿಟ್ಟಿಸಿಕೊಂಡಿದ್ದಾಳೆ. ಇದೀಗ ಗೃಹಸಚಿವ ಜಿ ಪರಮೇಶ್ವರ್ ಆಶ್ರಯ ಸಮಿತಿ ಸಭೆಯ ನಡಾವಳಿ ಪತ್ರವನ್ನು ರಾಬಿಯಾಗೆ ನೀಡಿದ್ದು ಶೀಘ್ರದಲ್ಲೇ ಮನೆ ಕೊಡಲಾಗುವುದು ಎಂದು ಭರವಸೆ ನೀಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಗು ಹಾಸಿಗೆಯಲ್ಲೇ ಮೂತ್ರ ಮಾಡಿತೆಂದು ಜನನಾಂಗಕ್ಕೇ ಉಗುರಿನಿಂದ ಗಾಯ ಮಾಡಿದ ಆಯಾ