Select Your Language

Notifications

webdunia
webdunia
webdunia
webdunia

ತುಮಕೂರು: ಡೆಂಘಿ ಜ್ವರಕ್ಕೆ 7 ವರ್ಷದ ಬಾಲಕ ಬಲಿ

Dengue Fever Symptoms, Karnataka Dengue Case, Tumakur Dengue

Sampriya

ತುಮಕೂರು , ಶುಕ್ರವಾರ, 7 ಫೆಬ್ರವರಿ 2025 (17:15 IST)
ತುಮಕೂರು: ಡೆಂಘಿ ಜ್ವರದಿಂದ 7ವರ್ಷದ ಬಾಲಕ ಮೃತಪಟ್ಟಿರುವ ಘಟನೆ ಜಿಲ್ಲೆಯ ಪಾವಗಡ ಪಟ್ಟಣದ ಬಾಬೈಯನ ಗುಡಿಬೀದಿಯಲ್ಲಿ ನಡೆದಿದೆ.  ಕರ್ನಾಟಕದಲ್ಲಿ ವೈರಲ್ ಫಿವರ್ ಜೊತೆಗೆ ಇದೀಗ ಡೆಂಘಿ ಜ್ವರ ಕೂಡ ಒಕ್ಕರಿಸಿಕೊಂಡಿದೆ.

ಹರೀಶ್ ಕುಮಾರ್​ ಎನ್ನುವವರ ಪುತ್ರ ಕರುಣಾಕರ್​(7) ಮೃತ ಬಾಲಕ.

ಪಾವಗಡದ ಸುಧಾ ಕ್ಲಿನಿಕ್​ನಲ್ಲಿ ಬಾಲಕ ಕಳೆದ 8 ದಿನದಿಂದ ಜ್ವರಕ್ಕೆ ಚಿಕಿತ್ಸೆ ಪಡೆಯುತ್ತಿದ್ದ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಕೊನೆ ಕ್ಷಣದವರೆಗೂ ಡೆಂಘಿ ಜ್ವರ ಎಂದು ವೈದ್ಯರು ಪೋಷಕರಿಗೆ ತಿಳಿಸಿಲ್ಲ.


ಹೀಗಾಗಿ ವೈದ್ಯರ ನಿರ್ಲಕ್ಷ್ಯಕ್ಕೆ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸುಧಾ ಕ್ಲಿನಿಕ್ ಮುಂದೆ ಪ್ರತಿಭಟನೆ ಮಾಡಲಾಗಿದೆ. ಪಾವಗಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಿಜೆಪಿಯಲ್ಲಿನ ಆಂತರಿಕ ಕಿತ್ತಾಟದಿಂದ ಪಕ್ಷಕ್ಕೆ ಹಿನ್ನಡೆಯಾಗಿದೆ: ಆರ್‌ ಅಶೋಕ್‌