Select Your Language

Notifications

webdunia
webdunia
webdunia
webdunia

ತುಳುವಿಗೆ ರಾಜ್ಯದ ಅಧಿಕೃತ ಭಾಷೆ ಸ್ಥಾನಮಾನ: ಸಿಎಂ ಭೇಟಿಗೆ ನಿರ್ಧಾರ

Tulu Language Official Language

Sampriya

ಮಂಗಳೂರು , ಶುಕ್ರವಾರ, 4 ಏಪ್ರಿಲ್ 2025 (16:14 IST)
ಮಂಗಳೂರು:  ತುಳುವಿಗೆ ರಾಜ್ಯದ ಅಧಿಕೃತ ಭಾಷೆಯಾಗಿ ಮಾನ್ಯತೆ ನೀಡಬೇಕು ಎಂದು ಆಗ್ರಹಿಸಿ ಎಪ್ರಿಲ್‌ 7ರಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳಿಗೆ  ಮನವಿ ಸಲ್ಲಿಸಲು 18 ತುಳು ಸಂಘಟನೆಗಳು ಒಟ್ಟು ಸೇರಿ ಅಖಿಲ ಅಮೇರಿಕ ತುಳುವರ ಅಂಗಣದ  ಪ್ರಮುಖರು ನಿರ್ಧಾರ ಕೈಗೊಂಡಿದ್ದಾರೆ.

ಇದಕ್ಕೂ ಮೊದಲು ಮುಂಬಯಿಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರನ್ನು ಭಾಸ್ಕರ ಶೇರಿಗಾರ್‌ ಅವರು  ಭೇಟಿ ಮಾಡಲಿದ್ದು, ಸಾಧ್ಯವಾದರೆ ಅಲ್ಲಿಯೇ ಮನವಿ ಸಲ್ಲಿಸಲಿದ್ದಾರೆ.

 ಬೆಂಗಳೂರಿನಲ್ಲಿ ಭಾಸ್ಕರ್‌ ಶೇರಿಗಾರ್‌ ಮತ್ತು ಶಾಂತಾರಾಮ ಅವರ ನೇತೃತ್ವದಲ್ಲಿ ಮನವಿ ಸಲ್ಲಿಸಲು ನಿರ್ಧರಿಸಲಾಗಿದ್ದು, ಬೆಂಗಳೂರಿನಲ್ಲಿರುವ ಪ್ರಮುಖರು ಇವರ ಜತೆ ಸೇರಿಕೊಳ್ಳಬಹುದು ಎಂದು  ಸರ್ವೋತ್ತಮ ಶೆಟ್ಟಿ ಅವರು ತಿಳಿಸಿದ್ದಾರೆ.

ಮನವಿ ಸಲ್ಲಿಸಿದ ಬಳಿಕ ಯಾವ ರೀತಿ ಹೋರಾಟ ಮಾಡಬೇಕು ಎಂಬ ಬಗ್ಗೆ ಪ್ರಮುಖರು ಚಿಂತಿಸಿ ಮಾಹಿತಿ ಹಂಚಿಕೊಳ್ಳಬೇಕು.  ನಾವು ನಮ್ಮ ಗುರಿಯನ್ನು ಮುಟ್ಟುವ ವರೆಗೆ ವಿರಮಿಸಬಾರದು ಎಂದು ಸರ್ವೋತ್ತಮ ಶೆಟ್ಟಿ ಅಬುದಾಬಿ ತಿಳಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಸನಗೌಡ ಯತ್ನಾಳ್ ಪಕ್ಷ ಕಟ್ಟಿದ್ರೂ ನಾವು ಸೇರಲ್ಲ: ಕುಮಾರ ಬಂಗಾರಪ್ಪ