Publish Date: Thu, 18 Jul 2019 (15:27 IST)
Updated Date: Thu, 18 Jul 2019 (15:29 IST)
ವಿಶ್ವಾಸ ಮತವನ್ನು ಮುಂದೂಡಬೇಕೆಂದು ಮಾಜಿ ಸಿಎಂ ಹಾಗೂ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಹೇಳಿದ್ದಾರೆ.
ಸ್ಪೀಕರ್ ಗೆ ಮನವಿ ಮಾಡಿದ ಅವರು, ಮೈತ್ರಿ ಪಕ್ಷಗಳಿಂದ 15 ಶಾಸಕರು ವಿಪ್ ಜಾರಿಮಾಡಿದ್ದರೂ ಅದನ್ನು ಉಲ್ಲಂಘನೆ ಮಾಡಿದ್ದಾರೆ.
ವಿಪ್ ಬಗ್ಗೆ ಅಂತಿಮ ತೀರ್ಮಾನ ಆಗೋವರೆಗೂ ವಿಶ್ವಾಸ ಮತ ಮಂಡನೆ ಬೇಡ ಅಂತ ಸದನದಲ್ಲಿ ಸ್ಪೀಕರ್ ಅವರನ್ನು ಕೋರಿದ್ದಾರೆ.
ಕಾಂಗ್ರೆಸ್ ಸದಸ್ಯರಿಗೆ ವಿಪ್ ಜಾರಿಮಾಡೋದು ನನ್ನ ಹಕ್ಕು. ಸ್ಪೀಕರ್ ಈ ಬಗ್ಗೆ ಸ್ಪಷ್ಟಪಡಿಸಬೇಕೆಂದರು.