Publish Date: Thu, 15 Apr 2021 (10:41 IST)
Updated Date: Thu, 15 Apr 2021 (10:42 IST)
ಬೆಂಗಳೂರು : ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಕೋರಿ ಸರ್ಕಾರದ ವಿರುದ್ಧ ಸಾರಿಗೆ ನೌಕರರ ಮುಷ್ಕರ ಇಂದೂ ಕೂಡ ಮುಂದುವರಿದಿದೆ.
ಇಂದಿಗೆ ಸಾರಿಗೆ ನೌಕರರ ಮುಷ್ಕರ 9ನೇ ದಿನಕ್ಕೆ ಕಾಲಿಟ್ಟಿದೆ. ಇಂದು ಪ್ರತಿಭಟನಾಕಾರರು ವಿಭಿನ್ನ ರೀತಿಯಲ್ಲಿ ನಡೆಸಲಿದ್ದಾರೆ. ಸಂಜೆ 6ಕ್ಕೆ ದೀಪ ಹಚ್ಚಿ ನೌಕರರ ಪ್ರತಿಭಟನೆ ನಡೆಸಲಿದ್ದಾರೆ.
ಹಾಗೇ ನೌಕರರು ಕುಟುಂಬ ಸಮೇತ ದೀಪ ಹಚ್ಚಿ ಚಳುವಳಿ ಮಾಡಲಿದ್ದಾರೆ ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ಇಂದು ಕೂಡ ಕೆಎಸ್ ಆರ್ಟಿಸಿ, ಬಿಎಂಟಿಸಿ ಬಸ್ ರಸ್ತೆಗಳಿಯುವುದಿಲ್ಲ ಎನ್ನಲಾಗಿದೆ.