Select Your Language

Notifications

webdunia
webdunia
webdunia
webdunia

ಸಾರಿಗೆ ಇಲಾಖೆ ನೌಕರರಿಗೆ ಸರಿಯಾದ ಸಮಯಕ್ಕೆ ಸಂಬಳ ಕೊಡ್ತೀವಿ : ರಾಮಲಿಂಗಾರೆಡ್ಡಿ

ಸಾರಿಗೆ ಇಲಾಖೆ ನೌಕರರಿಗೆ ಸರಿಯಾದ ಸಮಯಕ್ಕೆ ಸಂಬಳ ಕೊಡ್ತೀವಿ : ರಾಮಲಿಂಗಾರೆಡ್ಡಿ
ಬೆಂಗಳೂರು , ಬುಧವಾರ, 28 ಜೂನ್ 2023 (12:31 IST)
ಬೆಂಗಳೂರು : ಸಾರಿಗೆ ಇಲಾಖೆ ನೌಕರರಿಗೆ ಯಾವುದೇ ಸಮಸ್ಯೆ ಆಗದಂತೆ ಸರಿಯಾದ ಸಮಯಕ್ಕೆ ಸಂಬಳ ಕೊಡುತ್ತೇವೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸ್ಪಷ್ಟಪಡಿಸಿದ್ದಾರೆ.
 
ಸರ್ಕಾರ ಹಣ ಕೊಡದೇ ಹೋದರೆ ಮುಂದಿನ ತಿಂಗಳು ಸಾರಿಗೆ ಇಲಾಖೆಯಲ್ಲಿ ಸಂಬಳ ಕೊಡಲು ಹಣವಿಲ್ಲ ಎಂಬ ವಿಚಾರಕ್ಕೆ ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ನಾವು ಸಂಬಳ ಕೊಡದೇ ಇದ್ದಾಗ ಕೊಡೊಲ್ಲ ಅಂತ ಹೇಳಿ. ನಾವು ಸರಿಯಾದ ಸಮಯಕ್ಕೆ ಸಂಬಳ ಕೊಡುತ್ತೇವೆ ಎಂದು ತಿಳಿಸಿದರು.

ಸರ್ಕಾರದಿಂದ ನಮಗೆ ಹಣ ಕೊಡುತ್ತಾರೆ. ನಮ್ಮ ಸಂಪನ್ಮೂಲಗಳಿಂದಲೂ ಹಣ ಸಂಗ್ರಹ ಆಗುತ್ತಿದೆ. 4 ನಿಗಮಗಳು ಉತ್ತಮವಾಗಿ ಕೆಲಸ ಮಾಡುತ್ತಿವೆ. ಸಂಬಳ ಕೊಡಲ್ಲ ಎಂದು ಊಹೆ ಮಾಡಿಕೊಂಡು ಹೇಳಲು ಆಗಲ್ಲ. ಸರಿಯಾದ ಸಮಯಕ್ಕೆ ಸಂಬಳ ಕೊಡುತ್ತೇವೆ ಎಂದು ಸ್ಪಷ್ಟನೆ ನೀಡಿದರು. 

Share this Story:

Follow Webdunia kannada

ಮುಂದಿನ ಸುದ್ದಿ

ಕೃಷಿ ಇಲಾಖೆ ಅಧಿಕಾರಿಗಳ ಮನೆ ಮೇಲೆ ಲೋಕಾಯುಕ್ತ ರೇಡ್ ! ದಾಳಿಯಲ್ಲಿ ಸಿಕ್ಕಿದ್ದಾದ್ರು ಏನು?