ಬಿಜೆಪಿ ನಾಯಕರಿಗಿಲ್ವಾ ಸರ್ಕಾರದ ಟ್ರಾಫಿಕ್ ರೂಲ್ಸ್- ಸಾರ್ವಜನಿಕರ ಆಕ್ರೋಶ

ಮಂಗಳವಾರ, 17 ಸೆಪ್ಟಂಬರ್ 2019 (11:22 IST)
ಕೊಪ್ಪಳ : ಕೇಂದ್ರ ಸರ್ಕಾರ ಇತ್ತೀಚೆಗಷ್ಟೇ ಜಾರಿಗೆ ತಂದ ಟ್ರಾಫಿಕ್ ನಿಯಮ ಬಿಜೆಪಿ ನಾಯಕರಿಗಿಲ್ವಾ ಎಂಬ ಪ್ರಶ್ನೆ ಇದೀಗ ಸಾರ್ವಜನಿಕರಲ್ಲಿ ಉದ್ಭವವಾಗಿದೆ.
ಸಾರ್ವಜನಿಕರು ಈ ರೀತಿ ಪ್ರಶ್ನಿಸಲು ಪ್ರಮುಖ ಕಾರಣವಿದೆ. ಅದೇನೆಂದರೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಡಿಸಿಎಂ ಲಕ್ಷಣ ಸವದಿ ಅವರು ಸೀಟ್ ಬೆಲ್ಟ್ ಧರಿಸದೆ ಕಾರಿನಲ್ಲಿ ಸಂಚಾರ ಮಾಡಿದ್ದಾರೆ. ಸೀಟ್ ಬೆಲ್ಟ್ ಧರಿಸದಿದ್ದರೆ ಟ್ರಾಫಿಕ್ ನಿಯಮದ ಪ್ರಕಾರ ಒಂದು ಸಾವಿರ ದಂಡ ವಿಧಿಸಬೇಕಾಗುತ್ತದೆ.


ಆದರೆ ಅವರ  ಹಿಂದೆ ಮುಂದೆ ಪೊಲೀಸ್ ವಾಹನಗಳಿದ್ದರೂ ನಿಯಮ ಉಲ್ಲಂಘನೆಗೆ ಮಾಡಿದ ನಾಯಕರಿಗೆ  ದಂಡ ವಿಧಿಸದೆ, ಬದಲಾಗಿ ನಾಯಕರಿಗೆ  ಎಸ್‍ಪಿ ಹಾಗೂ ಡಿಸಿ ಹೂಗುಚ್ಚ ನೀಡಿ ಬರ ಮಾಡಿಕೊಂಡಿದ್ದಾರೆ. ಇದು ಸಾರ್ಜನಿಕರ ಆಕ್ರೋಶಕ್ಕೆ ಕಾರಣವಾಗಿದ್ದು, ಟ್ರಾಫಿಕ್ ನಿಯಮ ಬಿಜೆಪಿ ನಾಯಕರಿಗಿಲ್ವಾ ಎಂದು ಪ್ರಶ್ನಿಸುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಗೋಕಾಕ್ ಕ್ಷೇತ್ರದ ಉಪ ಚುನಾವಣೆಗೆ ಜಾರಕಿಹೊಳಿ ಸಹೋದರರ ನಡುವೆ ಪೈಪೋಟಿ