Webdunia - Bharat's app for daily news and videos

Install App

ಬೆಂಗಳೂರು ಟ್ರಾಫಿಕ್ ಜಾಮ್ ನಿಂದ ಒಂದಾದ ಜೋಡಿ; ಲವ್, ಮದುವೆ

Webdunia
ಬುಧವಾರ, 21 ಸೆಪ್ಟಂಬರ್ 2022 (15:25 IST)
ಬೆಂಗಳೂರು ಟ್ರಾಫಿಕ್​ ಜಾಮ್​ನಿಂದ ಶುರುವಾದ ಲವ್​ ಸ್ಟೋರಿ. ಈ ಸ್ಟೋರಿಯನ್ನು ಟ್ವಿಟರ್​ನಲ್ಲಿ ಶೇರ್​ ಮಾಡಲಾಗಿದ್ದು, ಸಿಕ್ಕಾಪಟ್ಟೆ ವೈರಲ್​ ಆಗಿದೆ. ಎಲ್ಲ ನೆಗಿಟಿವ್​ನಲ್ಲೂ ಒಂದು ಪಾಸಿಟಿವ್​ ಇದ್ದೇ ಇರುತ್ತದೆ ಎಂಬುದಕ್ಕೆ ಈ ಘಟನೆ ಉದಾಹರಣೆ ಆಗಿದೆ ಎಂದು ನೆಟ್ಟಿಗರು ಪ್ರತಿಕ್ರಿಯಿಸಿದ್ದಾರೆ.
 
ರೆಡ್ಡಿಟ್​ ಬಳಕೆದಾರನು ತನ್ನ ಪತ್ನಿಯನ್ನು ಮದುವೆಗೂ ಮುನ್ನಾ ಮೊದಲ ಬಾರಿಗೆ ಸೋನಿ ವರ್ಲ್ಡ್​ ಸಿಗ್ನಲ್​ನಲ್ಲಿ ಭೇಟಿಯಾದರಂತೆ. ಬಳಿಕ ಇಬ್ಬರು ಫ್ರೆಂಡ್ಸ್​ ಆದರಂತೆ. ಒಮ್ಮೆ ಆಕೆಯನ್ನು ಡ್ರಾಪ್​ ಮಾಡಲು ಹೋದಾಗ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದ ಈಜಿಪುರ ಫ್ಲೈಓವರ್​ನಲ್ಲಿ ಟ್ರಾಫಿಕ್​ ಜಾಮ್​ನಿಂದ ಸಿಲುಕಿಕೊಂಡರಂತೆ. ಆ ಕ್ಷಣದಲ್ಲಿ ಇಬ್ಬರಿಗೂ, ಒಂದೆಡೆ ಕಿರಿಕಿರಿ ಮತ್ತು ಹಸಿವು ಕೂಡ ಇತ್ತಂತೆ. ಜನನಿಬಿಡ ಏರಿಯಾದಿಂದ ಹೇಗಾದರೂ ಆಚೆ ಬರಬೇಕು ಅಂತಾ ಬೇರೆ ದಾರಿ ಆಯ್ದುಕೊಂಡ ಇಬ್ಬರು, ನಂತರ ಒಟ್ಟಿಗೆ ಹೋಟೆಲ್​ ಒಂದಕ್ಕೆ ಊಟಕ್ಕೆ ಹೋದರಂತೆ. ಆ ಕ್ಷಣದಲ್ಲೇ ಇಬ್ಬರ ಲವ್​ ಸ್ಟೋರಿ ಆರಂಭವಾಯಿತು ಎಂದು ಹೇಳಿಕೊಂಡಿದ್ದಾರೆ.
 
ಮೂರು ವರ್ಷಗಳ ಯಶಸ್ವಿ ಡೇಟಿಂಗ್​ ಮತ್ತು ಮದುವೆ ಆಗಿ 2 ವರ್ಷಗಳು ಕಳೆದಿದ್ದರೂ ಈಜಿಪುರದ 2.5 ಕಿ.ಮೀ ಉದ್ದದ ಫ್ಲೈಓವರ್​ ಕೆಲಸ ಮಾತ್ರ ಇನ್ನು ನಡೆಯುತ್ತಲೇ ಇದೆ ಎನ್ನುವ ಮೂಲಕ ತಮ್ಮ ವೈರಲ್​ ಸ್ಟೋರಿಯ ಕೊನೆಯಲ್ಲಿ ರೋಚಕ ಟ್ವಿಸ್ಟ್​ ನೀಡಿದ್ದಾರೆ. ಇದರು ಸರ್ಕಾರದ ಕಾರ್ಯವೈಖರಿಯನ್ನು ಅಣಕಿಸಿದಂತಿದೆ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments