Select Your Language

Notifications

webdunia
webdunia
webdunia
webdunia

ಟ್ರಾಫಿಕ್ ಫೈನ್ ಕಟ್ಟೋಕೆ ವಾಹನ ಸವಾರರಿಗೆ ನಿರಾಸಕ್ತಿ?

ಟ್ರಾಫಿಕ್ ಫೈನ್ ಕಟ್ಟೋಕೆ ವಾಹನ ಸವಾರರಿಗೆ ನಿರಾಸಕ್ತಿ?
ಬೆಂಗಳೂರು , ಸೋಮವಾರ, 13 ಮಾರ್ಚ್ 2023 (08:48 IST)
ಬೆಂಗಳೂರು : 50% ರಿಯಾಯಿತಿ ದರದಲ್ಲಿ ಟ್ರಾಫಿಕ್ ಫೈನ್ ಕಟ್ಟುವುದಕ್ಕೆ ಸರ್ಕಾರ 2ನೇ ಅವಧಿಗೆ ಅವಕಾಶ ನೀಡಿದೆ. ಆದರೆ ದಂಡ ಕಟ್ಟಲು ಈ ಬಾರಿ ವಾಹನ ಸವಾರರು ಹೆಚ್ಚಾಗಿ ಆಸಕ್ತಿ ತೋರುತ್ತಿಲ್ಲ.
 
ಟ್ರಾಫಿಕ್ ಫೈನ್ 50% ರಿಯಾಯಿತಿಯ ಸಮಯವನ್ನು 2 ಅವಧಿಗೆ ವಿಸ್ತರಿಸಿರುವ ಆದೇಶ ಹೊರಡಿಸಿ ವಾರ ಕಳೆದರೂ, ಈವರೆಗೆ 1 ಲಕ್ಷ 74 ಸಾವಿರ ಕೇಸ್ಗಳಲ್ಲಿ ಕೇವಲ 5 ಕೋಟಿ ದಂಡ ಕಟ್ಟಿ ಜನ ನಿರ್ಲಕ್ಷ್ಯ ವಹಿಸಿದ್ದಾರೆ.

ಮೊದಲ ಬಾರಿಗೆ ರಿಯಾಯಿತಿ ದರದಲ್ಲಿ ದಂಡಕ್ಕೆ ಸರ್ಕಾರ ಅವಕಾಶ ಕೊಟ್ಟಾಗ 9 ದಿನಗಳಲ್ಲಿ 43 ಲಕ್ಷ ಕೇಸ್ಗಳನ್ನು ಕ್ಲೀಯರ್ ಮಾಡಿ 126 ಕೋಟಿ ದಂಡ ಕಟ್ಟಿದ್ದರು. ಈ ವೇಳೆ ಪ್ರತಿಬಾರಿ ಉದ್ದುದ್ದ ಕ್ಯೂ ನಿಂತು ದಂಡ ಕಟ್ಟುತ್ತಿದ್ದ ಜನರೀಗ 2ನೇ ಅವಧಿಗೆ ಸರ್ಕಾರ ನೀಡಿರುವ 15 ದಿನದ ಅವಕಾಶಕ್ಕೆ ಡೋಂಟ್ಕೇರ್ ಎನ್ನುವಂತೆ ವರ್ತಿಸುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಇನ್ಫೋಸಿಸ್ ಅಧ್ಯಕ್ಷ ಸ್ಥಾನಕ್ಕೆ ಮೋಹಿತ್ ಜೋಶಿ ರಾಜೀನಾಮೆ