Select Your Language

Notifications

webdunia
webdunia
webdunia
webdunia

ಬೆಂಗಳೂರಿನಲ್ಲಿ ಟ್ರಾಫಿಕ್ ಇಳಿಮುಖ

ಬೆಂಗಳೂರಿನಲ್ಲಿ ಟ್ರಾಫಿಕ್ ಇಳಿಮುಖ
ಬೆಂಗಳೂರು , ಗುರುವಾರ, 10 ಫೆಬ್ರವರಿ 2022 (18:01 IST)
ವಾಹನ ಸಂಚಾರ ದಟ್ಟಣೆಗೆ ಹೆಸರಾಗಿದ್ದ ಬೆಂಗಳೂರಿನಲ್ಲಿ 2021ರ ಸಾಲಿನಲ್ಲಿ ಶೇ. 32ರಷ್ಟು ಸಂಚಾರ ದಟ್ಟಣೆ ಕಡಿಮೆಯಾಗಿದೆ!
 
ಹೌದು, ಈ ಕುರಿತು ಭೌಗೋಳಿಕ ಪ್ರದೇಶ ತಂತ್ರಜ್ಞಾನ ತಜ್ಞ ಸಂಸ್ಥೆಯಾದ 'ಟಾಮ್ ಟಾಮ್' ತನ್ನ ವಾರ್ಷಿಕ ವರದಿಯನ್ನು ಬಿಡುಗಡೆ ಮಾಡಿದ್ದು, ಬೆಂಗಳೂರು ಹಿಂದೆಂದಿಗಿಂತಲೂ ವಾಹನ ದಟ್ಟಣೆಯಲ್ಲಿ ಇಳಿಮುಖ ಕಂಡಿದೆ ಎಂದು ಅಧ್ಯಯನದ ಮೂಲಕ ಅಂಕಿ ಅಂಶ ನೀಡಿದೆ.
ಟಾಮ್ ಟಾಮ್ ಸಂಸ್ಥೆಯು ವಿಶ್ವದ ಪ್ರಮುಖ 404 ಮಹಾನಗರಗಳಲ್ಲಿನ ಭೌಗೋಳಿಕ ಅನ್ವೇಷಣೆ ನಡೆಸಿ, ಅಲ್ಲಿನ ಸಂಚಾರ ದಟ್ಟಣೆ ಬಗ್ಗೆ ಪ್ರತಿ ವರ್ಷ ವರದಿ ಬಿಡುಗಡೆ ಮಾಡುತ್ತದೆ. 11ನೇ ಆವೃತ್ತಿಯಾಗಿ ಬಿಡುಗಡೆ ಮಾಡಿರುವ 2021ರ ವರದಿಯ ಪ್ರಕಾರ ಬೆಂಗಳೂರು ವಾಹನ ಸಂಚಾರ ದಟ್ಟಣೆಯು ಶೇ.31ರಷ್ಟು ಕಡಿಮೆಯಾಗಿದೆ. 2019ರಲ್ಲಿ 6ನೇ ಸ್ಥಾನದಲ್ಲಿದ್ದ ಬೆಂಗಳೂರು 2021ರಲ್ಲಿ 10ನೇ ಸ್ಥಾನ ಪಡೆದುಕೊಂಡಿದೆ.
 
ಇನ್ನು ಮುಂಬೈ 5ನೇ ಸ್ಥಾನ ಪಡೆದುಕೊಂಡಿದ್ದರೆ, ನವದೆಹಲಿ 11 ಹಾಗೂ ಪುಣೆ 21ನೇ ಸ್ಥಾನಕ್ಕೆ ತಲುಪಿದೆ.
 
ಕೋವಿಡ್ ಸಾಂಕ್ರಮಿಕದಿಂದ ಕಂಪನಿ, ಶಾಲಾ ಕಾಲೇಜುಗಳು ವರ್ಕ್ ಫ್ರಮ್ ಹೋಮ್ ಹಾಗೂ ಆನ್‌ಲೈನ್ ಕ್ಲಾಸ್ ಮೊರೆ ಹೋದ ಕಾರಣ ರಸ್ತೆಯಲ್ಲಿ ವಾಹನ ಸಂಚಾರ ತೀರ ಇಳಿಮುಖವಾಗಿದೆ. ಆದರೆ, ಅಕ್ಟೋಬರ್ 9ರಂದು ಬೆಂಗಳೂರಿನಲ್ಲಿ ಹೆಚ್ಚು ಮಳೆಯಾದ ಕಾರಣ, ಆ ಸಂದರ್ಭದಲ್ಲಿ ಸಂಚಾರ ದಟ್ಟಣೆ ಹೆಚ್ಚಿನ ಮಟ್ಟದಲ್ಲಿ ವರದಿಯಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಹಿಜಾಬ್ ವಿವಾದ ತಾತ್ಕಾಲಿಕ ಬ್ರೇಕ್