Select Your Language

Notifications

webdunia
webdunia
webdunia
webdunia

ಸಿಟಿಯಲ್ಲಿ ಟ್ರಾಫಿಕ್ ಕಂಟ್ರೋಲ್ ಮಾಡಲು ಹೊಸ ಪ್ಲ್ಯಾನ್..!

Traffic congestion problem on Bellary road
bangalore , ಮಂಗಳವಾರ, 21 ಜೂನ್ 2022 (20:22 IST)
ಟ್ರಾಫಿಕ್ ಅಂದ್ರೆ ಸಿಲಿಕಾನ್ ಸಿಟಿ ಜನರಿಗೆ ದೊಡ್ಡ ತಲೆನೋವಾಗಿದೆ. ಸಂಚಾರಿ ಪೊಲೀಸರು ಸಹ ವಾಹನ ದಟ್ಟಣೆಗೆ ಕಡಿವಾಣ ಹಾಕಲು ಹರಸಾಹಸ ಮಾಡ್ತಿದ್ದಾರೆ. ಆದ್ರೆ ಇದೀಗ  ಸರ್ಕಾರ KRDCL ಮುಖಾಂತರ ಸಿಟಿಯ 20% ಟ್ರಾಫಿಕ್ ಕಂಟ್ರೋಲ್ ಗೆ ನೂತನ ಯೋಜನೆಗೆ ಮುಂದಾಗಿದೆ.ಟ್ರಾಫಿಕ್ ಅಂದ್ರೆ ಸಿಲಿಕಾನ್ ಸಿಟಿ ಜನರಿಗೆ ದೊಡ್ಡ ತಲೆನೋವಾಗಿದೆ. ಸಂಚಾರಿ ಪೊಲೀಸರು ಸಹ ವಾಹನ ದಟ್ಟಣೆಗೆ ಕಡಿವಾಣ ಹಾಕಲು ಹರಸಾಹಸ ಮಾಡ್ತಿದ್ದಾರೆ. ಆದ್ರೆ ಇದೀಗ  ಸರ್ಕಾರ KRDCL ಮುಖಾಂತರ ಸಿಟಿಯ 20% ಟ್ರಾಫಿಕ್ ಕಂಟ್ರೋಲ್ ಗೆ ನೂತನ ಯೋಜನೆಗೆ ಮುಂದಾಗಿದೆ.
ಮೈಸೂರು, ತುಮಕೂರು, ಹಾಸನ, ಆನೇಕಲ್, ಸೇರಿದಂತೆ ರಾಜ್ಯದ ವಿವಿಧ ಭಾಗದಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಲು ಅನಿವಾರ್ಯವಾಗಿ ನಗರ ಪ್ರದೇಶಿಸಬೇಕಿತ್ತು. ಇನ್ಮುಂದೆ ಹೊರಗಿನಿಂದ ಬಂದ ವಾಹನಗಳು ಏರ್‌ಪೋರ್ಟ್‌ಗೆ ಹೋಗಲು ನಗರ ಪ್ರವೇಶಿಸುವ ಅಗತ್ಯವೇ ಇಲ್ಲ. ಹೀಗಾಗಿ ನಗರದೊಳಗೆ ಟ್ರಾಫಿಕ್ ಸಮಸ್ಯೆ ಕಡಿವಾಣ ಹಾಕಬುದಾಗಿದೆ. ರಾಜ್ಯ ಸರ್ಕಾರ  KRDCL ಮೂಲಕ 154 ಕಿ.ಮೀ. ಉದ್ದದ ಸಪೋರ್ಟಿಂಗ್ ರಸ್ತೆಗಳ ನಿರ್ಮಾಣ ಮಾಡ್ತಿದೆ.  KRDCL ಸುಮಾರು 2 ಸಾವಿರ ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಕಾರ್ಯ ಆರಂಭವಾಗಿದೆ. ಈ ಹೊಸ ಯೋಜನೆಗೆ ಸುಮಾರು 72 ಸಾವಿರ ಕೋಟಿ ವೆಚ್ಚದಲ್ಲಿ ಕಾಮಗಾರಿ ಆರಂಭಿಸಲಾಗಿದೆ. ಕೆಲವೆಡೆ ಕಾಮಗಾರಿ ಕೊನೆಯ ಹಂತ ಕೂಡ ತಲುಪಿದೆ.

ರಸ್ತೆಗಳ ವಿವರ
ಪ್ಯಾಕೇಜ್  - ರಸ್ತೆ ಉದ್ದ - ಮೊತ್ತ - ಎಲ್ಲಿಂದ ಎಲ್ಲಿಗೆ?  
• ಪ್ಯಾಕೇಜ್ 1  -  20.11 -  154.01- ಬೂದಿಗೆ ಕ್ರಾಸ್ ನಿಂದ ಏರ್ಪೋರ್ಟ್
• ಪ್ಯಾಕೇಜ್ 2 (ಎ) -  15.25 - 174.37 - ನೆಲಮಂಗಲದಿಂದ  ಮಧುರೆ 
• ಪ್ಯಾಕೇಜ್ 2 (ಬಿ) - 23.99 - 190.19 - ಮಧುರೆಯಿಂದ (NH 74)ದೇವನಹಳ್ಳಿ ರಸ್ತೆ (NH 7)     
• ಪ್ಯಾಕೇಜ್ -3 (ಎ)   33.20  -151.29 - ಬಿಡದಿಯಿಂದ ಜಿಗಣಿ
• ಪ್ಯಾಕೇಜ್ 3 (ಬಿ) -  22.98  - 154.48  - ಬನ್ನೇರುಘಟ್ಟದಿಂದ ಆನೇಕಲ್ ಬಳಿಯ ಬೆಸ್ತಮಾನಹಳ್ಳಿ   
• ಪ್ಯಾಕೇಜ್ 4  (ಎ) -  39. 28    -  204. - ಬೆಸ್ತಮಾನಹಳ್ಳಿ (SH-35) ಹೊಸಕೋಟೆ.
ವಾಹನ ದಟ್ಟಣೆ ತಪ್ಪಿಸುವ ಉದ್ದೇಶದಿಂದ 1.96 ಕಿ  ಮೀ. ಉದ್ದದ ಎಲಿವೇಟೆಡ್ ಕಾರಿಡಾರ್‌ ಅನ್ನು 182.16 ಕೋಟಿ ವೆಚ್ಚದಲ್ಲಿ ನಿಲ್ದಾಣ ಮಾಡಲಾಗುತ್ತಿದೆ. 2024ರ ಜೂನ್ ವೇಳೆಗೆ ಪೂರ್ಣಗೊಳಿಸಲು ಯೋಜನೆ ರೂಪಿಸಲಾಗಿದ್ದು ಗೊಲ್ಲಹಳ್ಳಿ, ರಾಮಾನು ಕುಂಟೆ, ನಾರಾಯಣಪುರ, ಕಾಡುಗೋಡಿ ಬಳ್ಳಿ ರೈಲ್ವೆ ಮೇಲ್ವೇತುವೆ, ಬಸವನಹಳ್ಳಿ ಬಳಿ ವರ್ತೂರು ಕೋಡಿ ಸೇರಿದಂತೆ ಒಟ್ಟು ಮೂರು  ಅಭಿವೃದ್ಧಿ ಕಾರ್ಯ  ಭರದಿಂದ ಸಾಗ್ತಿದೆ.ಸಿಟಿಯ  ಟ್ರಾಫಿಕ್ ಸಮಸ್ಯೆ ನಿವಾರಿಸಲು ಸರ್ಕಾರ ಸಿದ್ಧವಾಗಿದೆ. ಈ  ಬಹುಕೋಟಿ ಯೋಜನೆ  ಭರದಿಂದ ಸಾಗ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಶಿಕ್ಷಕರ ನೇಮಕಾತಿ ಹುದ್ದೆಗೆ ಜೂ.24 ರಂದು ಕೌನ್ಸೆಲಿಂಗ್