ರಾಜಧಾನಿ ಬೆಂಗಳೂರಿನಲ್ಲಿ ಟೋಯಿಂಗ್ ಕಿರಿಕ್ ತಪ್ಪಿಸಲು ಸರ್ಕಾರ ನೂತನ ಕ್ರಮ ಕೈಗೊಂಡಿದೆ. ಈ ಸಂಬಂಧ ಸಂ ಚಾರಿ ವಿಭಾಗದ ಜಂಟಿ ಆಯುಕ್ತ ರವಿಕಾಂತೇಗೌಡ ಮಾಹಿತಿ ನೀಡಿದ್ದಾರೆ. ನಗರದಲ್ಲಿ ಇತ್ತೀಚೆಗೆ ಹೆಚ್ಚಾಗುತ್ತಿರುವ ಟೋಯಿಂಗ್ ವಿ ಚಾರ ತಪ್ಪಿಸಲು, ಸಂಚಾರಿ ಪೊಲೀಸರಿಗೆ ಬಾಡಿ ಒನ್ ಕ್ಯಾಮರಾ ಅಳವಡಿಸಲಾಗುತ್ತದೆ.
ಕ್ಯಾಮೆರಾದಲ್ಲಿ ವಾಯ್ಸ್ ರೆಕಾರ್ಡ್ ಜೊ ತೆಗೆ ಲೊಕೇಶನ್ ಟ್ರೇಸ್ ಕೂಡ ಇರಲಿದೆ. 2 ಸಾವಿರ ಕ್ಯಾಮರಾ ಅಳವಡಿಸಲು ಸರ್ಕಾರ ಸೂಚನೆ ನೀಡಿದೆ ಎಂದು ಹೇಳಿದ್ದಾರೆ. ಅಲ್ಲದೇ ನಗರದ ಎಲ್ಲಾ ದಿಕ್ಕಿನಲ್ಲಿಯೂ ಈ ಕ್ಯಾಮರಾ ಸಹಕಾರಿ ಆಗಲಿದ್ದು,
ಎಎನ್ ಪಿ ಕ್ಯಾಮೆರಾ ಸಂಚಾರಿ ಪೊಲೀಸರಿಗೆ ಸಾಥ್ ನೀಡಲಿದೆ. ಇನ್ನೂ ವಾಹನಗಳು ಅತಿವೇಗ ಮತ್ತು ನಿಯಮ ಉಲ್ಲಂಘಿಸಿದರೆ ಕ್ಷಣಮಾತ್ರದಲ್ಲೇ ಸೀಜ್ ಆಗಲಿದ್ದು, ಮುಖ್ಯ ಕಛೇರಿ ಸರ್ವರ್ ಹಾಗೂ ಪೊಲೀಸರ ಮೊಬೈಲ್ ಗೆ ಮೆಸೇಜ್ ಹೋಗಲಿದೆ. ಅಲ್ಲದೇ ಕದ್ದ ವಾಹನ ಇದ್ದರೆ ಕ್ಷಣಮಾತ್ರದಲ್ಲೇ ನಂಬರ್ ಪ್ಲೇಟ್ ಟ್ರ್ಯಾಕ್ ಮಾಡಲಿದ್ದು, ಬೆಂಗಳೂರಿನ 20 ಕಡೆಗಳಲ್ಲಿ ಕ್ಯಾಮರಾ ಅಳವಡಿಸಲಾ ಗುತ್ತದೆ. ಇನ್ನೂ ಈ ಕ್ಯಾಮೆರಾ ಅಳವಡಿಕೆ ಯಶಸ್ವಿಯಾಗಿ ಆದರೆ ಮುಂದಿನ ದಿನಗಳಲ್ಲಿ ಮತ್ತಷ್ಟು ಕ್ಯಾಮರಾ ಅಳವಡನೆಗೆ ಚಿಂತನೆ ನಡೆಸಲಾಗುತ್ತದೆ ಎಂದು ರವಿಕಾಂತೇಗೌಡ ಮಾಹಿತಿ ನೀಡಿದ್ದಾರೆ.