Select Your Language

Notifications

webdunia
webdunia
webdunia
webdunia

ಮೆಟ್ರೋ ನಿಲ್ದಾಣಕ್ಕೆ ಪುನೀತ್ ರಾಜಕುಮಾರ್ ಹೆಸರು

ಮೆಟ್ರೋ ನಿಲ್ದಾಣಕ್ಕೆ ಪುನೀತ್ ರಾಜಕುಮಾರ್ ಹೆಸರು
ಬೆಂಗಳೂರು , ಭಾನುವಾರ, 6 ಫೆಬ್ರವರಿ 2022 (15:11 IST)

ಪುಲಿಕೇಸಿ ನಗರ ಮೆಟ್ರೊ ನಿಲ್ದಾಣಕ್ಕೆ ಪುನೀತ್ ರಾಜ್​ಕುಮಾರ್ ಹೆಸರನ್ನು ಇರಿಸಬೇಕೆಂದು ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಅವರಿಗೆ ಕರ್ನಾಟಕ ಬಹುಜನ ಫೆಡರೇಷನ್ ಸಂಘಟನೆ ಮನವಿ ಮಾಡಿತ್ತು. ಈ ಕುರಿತು ಸಂಸದ ಡಿ.ವಿ.ಸದಾನಂದಗೌಡರ ಅವರಿಗೂ ಮನವಿ ಪತ್ರ ನೀಡಲಾಗಿತ್ತು.

ರಾಜ್ಯದ ಹೆಮ್ಮೆಯ ನಟ ಪುನೀತ್ ಅವರನ್ನು ಕನ್ನಡಿಗರು ಹಲವು ರೀತಿಗಳಲ್ಲಿ ಗೌರವಿಸುತ್ತಿದ್ದಾರೆ. ಬಿಬಿಎಂಪಿ ನೌಕರರ ಸಂಘವು ಬೆಂಗಳೂರು ಮಹಾನಗರ ಪಾಲಿಕೆ ಆವರಣದಲ್ಲಿ ಪುನೀತ್ ಪುತ್ಥಳಿ ನಿರ್ಮಾಣಕ್ಕೆ ಮುಂದಾಗಿದೆ. ನಗರದ ಯಾವುದಾದರೂ ಒಂದು ಮೆಟ್ರೊ ನಿಲ್ದಾಣಕ್ಕೆ ಪುನೀತ್ ಹೆಸರು ನಾಮಕರಣ ಮಾಡಬೇಕು ಎಂಬ ಒತ್ತಾಯವೂ ವ್ಯಾಪಕವಾಗಿ ಕೇಳಿ ಬಂದಿತ್ತು. ಬೆಂಗಳೂರಿನಲ್ಲಿ ಪ್ರಸ್ತುತ ಬಾಲಗಂಗಾಧರನಾಥ ಸ್ವಾಮೀಜಿ, ಸ್ವಾಮಿ ವಿವೇಕಾನಂದ, ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಸರ್ ಎಂ.ವಿಶ್ವೇಶ್ವರಯ್ಯ ಅವರ ಹೆಸರಿನಲ್ಲಿ ಮೆಟ್ರೊ ನಿಲ್ದಾಣಗಳು ಇವೆ.


Share this Story:

Follow Webdunia kannada

ಮುಂದಿನ ಸುದ್ದಿ

ಪತಿಗೆ ಡ್ರಗ್ಸ್ ತಿನಿಸುತ್ತಿದ ಪತ್ನಿ